Asianet Suvarna News Asianet Suvarna News

ಶಿರಾದಲ್ಲಿ ವಿಜಯೇಂದ್ರ ಮಾಡಿದ್ದೇನೂ ಇಲ್ಲ, ಗೆಲುವು ಅವರ ಸಾಧನೆಯಲ್ಲ: ಕೆ ಎನ್ ರಾಜಣ್ಣ

ಶಿರಾದಲ್ಲಿ ಬಿಜೆಪಿ ಅಲೆಯೇನೂ ಇರಲಿಲ್ಲ. ಅಲ್ಲಿ ಸಿಎಂ ಪುತ್ರ ವಿಜಯೇಂದ್ರ ಬಂದು ಪ್ರಚಾರ ಮಾಡಿರುವುದು, ರಣತಂತ್ರ ರೂಪಿಸಿರುವುದು ಬಿಜೆಪಿ ಗೆಲುವಿಗೆ ಕಾರಣವಾಯ್ತು ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಶಾಸಕ ರಾಜಣ್ಣ ಮಾತನಾಡಿದ್ದಾರೆ. 

ಬೆಂಗಳೂರು (ನ. 10): ಶಿರಾದಲ್ಲಿ ಬಿಜೆಪಿ ಅಲೆಯೇನೂ ಇರಲಿಲ್ಲ. ಅಲ್ಲಿ ಸಿಎಂ ಪುತ್ರ ವಿಜಯೇಂದ್ರ ಬಂದು ಪ್ರಚಾರ ಮಾಡಿರುವುದು, ರಣತಂತ್ರ ರೂಪಿಸಿರುವುದು ಬಿಜೆಪಿ ಗೆಲುವಿಗೆ ಕಾರಣವಾಯ್ತು ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಶಾಸಕ ರಾಜಣ್ಣ ಮಾತನಾಡಿದ್ದಾರೆ. 

'ಶಿರಾದಲ್ಲಿ ವಿಜಯೇಂದ್ರ ಮಾಡಿದ್ದೇನೂ ಇಲ್ಲ. ಅವರು ಚುನಾವಣೆ ಎದುರಿಸೋದು ಬೇರೆ ರೀತಿ. ಹಣ ಹಂಚಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ' ಎಂದರು.  

ಪ್ರಾಮಾಣಿಕವಾಗಿ ಜನಸೇವೆ ಮಾಡಿ, ಆರ್‌ಆರ್‌ ನಗರ ಜನರ ಋಣ ತೀರಿಸುತ್ತೇನೆ: ಮುನಿರತ್ನ

ಇನ್ನು ಜೆಡಿಎಸ್ ಅನುಕಂಪದ ಅಲೆ ಮೂಲಕ ವೋಟ್ ಪಡೆಯಲು ಯತ್ನಿಸಿತು. ಆದರೆ ಇದು ವರ್ಕೌಟ್ ಆಗಿಲ್ಲ. ತುಮಕೂರಿನಲ್ಲಿ ದೇವೇಗೌಡ್ರು ಸೋತು ಹೋದ ಮೇಲೆ ಅವರು ಹೇಳಿದವರಿಗೆ ಯಾರು ವೋಟ್ ಹಾಕ್ತಾರೆ ಹೇಳಿ' ಎಂದು ರಾಜಣ್ಣ ಹೇಳಿದ್ದಾರೆ.