ಕನಕವೀರ Vs ಶಿಕಾರಿವೀರ..ಯಾರು ಪವರ್‌ಫುಲ್..? ಮದ್ದಾನೆ ಯುದ್ಧಕ್ಕೆ ಸಾಕ್ಷಿಯಾಗಲಿದೆ ರಾಜ್ಯ ರಾಜಕಾರಣ..!
ಅತ್ತ ಬಂಡೆ..ಇತ್ತ ವಿಜಯೇಂದ್ರ..ಶುರು ರಣಕಾಳಗ..!
ಕಾಂಗ್ರೆಸ್ ಕಟ್ಟಪ್ಪನ ಮುಂದೆ ಕೇಸರಿ ವಿಜಯ ಸಾರಥಿ..!
ಕನಕವೀರ Vs ಶಿಕಾರಿವೀರ..ಯಾರು ಪವರ್‌ಫುಲ್..?
ಒಂದು ಕಡೆ ಕನಕವೀರ, ಮತ್ತೊಂದ್ಕಡೆ ಶಿಕಾರಿವೀರ.. ರಾಜ್ಯ ರಾಜಕಾರಣದಲ್ಲಿ ಉಗ್ರಂ ವೀರಂ ಯುದ್ಧಕ್ಕೆ ರಣರೋಚಕ ರಣರಂಗ ರೆಡಿಯಾಗಿದೆ. ಮುಂದೆ ನಡೆಯಲಿರೋದು ಬರೀ ಯುದ್ಧವಲ್ಲ, ಮದಗಜಗಳ ಕಾಳಗ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪನವರ ಪುತ್ರ, ಬಿ.ವೈ ವಿಜಯೇಂದ್ರ (BY Vijayendra ) ನೇಮಕವಾಗ್ತಿದ್ದಂತೆ ರಾಜ್ಯ ರಾಜಕಾರಣದಲ್ಲೊಂದು ಸಂಚಲನ ಸೃಷ್ಠಿಯಾಗಿದೆ. ಬಿಜೆಪಿಯಲ್ಲೊಂದು(BJP) ಸಂಚಲನ, ಕಾಂಗ್ರೆಸ್‌ನಲ್ಲಿ(Congress) ಮತ್ತೊಂದು ಸಂಚಲನ. ಕಾರಣ ಶಿಕಾರಿಗೆ ಹೊರಟಿರೋ ಶಿಕಾರಿವೀರನ ಖದರು, ಪವರು, ಟೆಂಪರು. ಕಮಲಕೋಟೆಗೆ ಇನ್ನು ಮುಂದೆ ವಿಜಯೇಂದ್ರ ದಂಡನಾಯಕ. ವಿಜಯೇಂದ್ರ ಪಟ್ಟಾಭಿಷೇಕದ ಕಾರಣಕ್ಕೆ ಕಾಂಗ್ರೆಸ್'ನಲ್ಲಿ ಸಂಚಲನ ಶುರುವಾಗಿರೋದು ಯಾಕೆ ಗೊತ್ತಾ..? ಕರ್ನಾಟಕದಲ್ಲಿ(Karnataka) ಕೈ ಪಾಳೆಯದ ಚುಕ್ಕಾಣಿ ಹಿಡಿದಿರೋದು ರಣಬೇಟೆಗಾರ ಖ್ಯಾತಿಯ ಕನಕಪುರ ಬಂಡೆ ಡಿಕೆ ಶಿವಕುಮಾರ್. ರಾಜ್ಯದಲ್ಲಿ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರೋದು ಕನಕಪುರ ಬಂಡೆ ಡಿಕೆ ಶಿವಕುಮಾರ್. ಡಿಕೆ ಅಂದ್ರೆ ಶಕ್ತಿ, ತಾಕತ್ತಿನ ರಾಜಕಾರಣಿ. ಹಣಬಲ, ತೋಳ್ಬಲದಲ್ಲಿ ಸೈ ಎನಿಸಿಕೊಂಡಿರೋ ಪಂಟರ್. ಡಿಕೆಶಿಗೆ ಚದುರಂಗದಾಟವೂ ಗೊತ್ತು, ಅಖಾಡದ ಕುಸ್ತಿಯೂ ಗೊತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ ಡಿಕೆ ಶಿವಕುಮಾರ್(DK Shivakumar), ಅಖಾಡದಲ್ಲಿ ಪಳಗಿದ ಹಳೇ ಪೈಲ್ವಾನ್. ಡಿಕೆ ಶಿವಕುಮಾರ್ ಕಾಂಗ್ರೆಸ್ ಪಾಲಿನ ಪೈಲ್ವಾನನೇ ಬಿಡಿ. ರಾಜಕೀಯ ಅಂತ ಬಂದ್ರೆ ಜಿದ್ದಿಗೆ ಬಿದ್ದು ಹೋರಾಡೋದು ಡಿಕೆ ಟ್ರೇಡ್ ಮಾರ್ಕ್. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭೂತಪೂರ್ವ ಗೆಲುವಿನ ರೂವಾರಿಗಳಲ್ಲಿ ಡಿಕೆಶಿ ಕೂಡ ಒಬ್ರು. ಕಾಂಗ್ರೆಸ್ಸನ್ನು ಗೆಲ್ಲಿಸಿದ್ದು ಡಿಕೆ ಸಾಹೇಬನ ಸಂಘಟನಾ ಶಕ್ತಿ. ಇಂಥಾ ಪೈಲ್ವಾನನ ಮುಂದೆ ನಿಂತು ಪ್ರತಿ ಪಟ್ಟು ಹಾಕಬಲ್ಲ ಪೈಲ್ವಾನ್ ರಾಜ್ಯ ಬಿಜೆಪಿ ಕಡೆಯಿಂದ ಕಾಣ್ತಾ ಇರ್ಲಿಲ್ಲ. ಹೀಗಾಗಿ ಯುದ್ಧ ಒಂದು ರೀತಿನಲ್ಲಿ ವನ್ ಸೈಡೆಡ್ ಆಗಿ ಕಾಣ್ತಾ ಇತ್ತು. ಆದ್ರೆ ಇನ್ನು ಮುಂದೆ ಹಾಗಲ್ಲ.. ಡಿಕೆ ಶಿವಕುಮಾರ್ ಅವ್ರಿಗೆ ಸರಿಸಮನಾಗಿ ಪಟ್ಟು ಹಾಕಲ್ಲ ಹೊಸ ತಲೆಮಾರಿನ ಪೈಲ್ವಾನನೊಬ್ಬ ಕೇಸರಿ ಪಾಳೆಯದಿಂದ ಎದ್ದು ಬಂದಿದ್ದಾನೆ. ಅವರೇ ಬಿ.ವೈ ವಿಜಯೇಂದ್ರ.
ಇದನ್ನೂ ವೀಕ್ಷಿಸಿ: ಕಣ್ಣೆದುರೇ ಅಗ್ನಿಪರೀಕ್ಷೆ..ಎದುರಿಸಬೇಕಿದೆ ಸತ್ವಪರೀಕ್ಷೆ!ಮತ್ತೆ ಜೋರಾಗಲಿದೆ ರಾಜಾಹುಲಿ ಆರ್ಭಟ!