'ಅಧಿಕಾರಕ್ಕಾಗಿ ಎಚ್‌ಡಿಕೆ ಪುಟಗೋಸಿ, ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ;

ರೈತ ಪ್ರತಿಭಟನೆಯಲ್ಲಿ ಕುಮಾರಣ್ಣ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ಧಾರೆ. 'ಎಚ್‌ಡಿಕೆ ಮಣ್ಣಿನ ಮಗ ಎನ್ನುತ್ತಾರೆ. ಅವರೇ ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ. ರೈತರಿಗೆ ದ್ರೋಹ ಮಾಡಿದ್ದಾರೆ. ಈಗ ಬುದ್ದಿವಂತಿಕೆ ಮಾತಾಡ್ತಾರೆ' ಎಂದು ಕೋಡಿಹಳ್ಳಿ ವಾಗ್ದಾಳಿ ನಡೆಸಿದರು. 

First Published Dec 10, 2020, 5:08 PM IST | Last Updated Dec 10, 2020, 5:08 PM IST

ಬೆಂಗಳೂರು (ಡಿ. 10): ರೈತ ಪ್ರತಿಭಟನೆಯಲ್ಲಿ ಕುಮಾರಣ್ಣ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ಧಾರೆ. 'ಎಚ್‌ಡಿಕೆ ಮಣ್ಣಿನ ಮಗ ಎನ್ನುತ್ತಾರೆ. ಅವರೇ ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ. ರೈತರಿಗೆ ದ್ರೋಹ ಮಾಡಿದ್ದಾರೆ. ಈಗ ಬುದ್ದಿವಂತಿಕೆ ಮಾತಾಡ್ತಾರೆ' ಎಂದು ಕೋಡಿಹಳ್ಳಿ ವಾಗ್ದಾಳಿ ನಡೆಸಿದರು. 

ಎಚ್‌.ಡಿ.ಕುಮಾರಸ್ವಾಮಿ ಅವರು, ಹಿತಾಸಕ್ತಿಗಾಗಿ ಪುಟಗೋಸಿ, ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ. ಅವರು ರೈತರ ಸಾಲ ಮನ್ನಾವನ್ನು ಯಾರಪ್ಪನ ಮನೆ ಹಣ ತಂದು ಮಾಡಿಲ್ಲ. ನಮ್ಮ ತೆರಿಗೆ ಹಣದಿಂದ ಸಾಲ ಮನ್ನಾ ಮಾಡಲಾಗಿದೆ. ಇದಕ್ಕೆ ಪ್ರಶಂಸಿಸುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರು ಪಕ್ಕಾ ವ್ಯವಹಾರಸ್ಥರು. ರಾಜಕೀಯ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ ಎಂದು ಆರೋಪಿಸಿದರು.