Asianet Suvarna News Asianet Suvarna News

ಅನರ್ಹ ಶಾಸಕರ ಪಕ್ಷ ಸೇರ್ಪಡೆ ಜೋರು, ಸವದಿ ಗೈರು: ಲಕ್ಷ್ಮಣನ ಮುಂದಿನ ನಡೆ ಕುತೂಹಲ

ಇಂದು [ಗುರುವಾರ] ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅನರ್ಹ ಶಾಸಕರು ಪಕ್ಷ ಸೇರ್ಪಡೆ ಜೋರಾತ್ತು. ಈ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಇಬ್ಬರು ಡಿಸಿಎಂ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿ ಅನರ್ಹ ಶಾಸಕರನ್ನು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿಕೊಂಡ್ರು.  ಆದ್ರೆ, ಉಪಮುಖ್ಯಂತ್ರಿ ಲಕ್ಷ್ಮಣ ಸವದಿ ಮಾತ್ರ ಸಮಾರಂಭದಲ್ಲಿ ಕಾಣಿಸಲೇ ಇಲ್ಲ. 

ಬೆಂಗಳೂರು, [ನ.14]: ಇಂದು [ಗುರುವಾರ] ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅನರ್ಹ ಶಾಸಕರು ಪಕ್ಷ ಸೇರ್ಪಡೆ ಜೋರಾತ್ತು. ಈ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಇಬ್ಬರು ಡಿಸಿಎಂ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿ ಅನರ್ಹ ಶಾಸಕರನ್ನು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿಕೊಂಡ್ರು.  ಆದ್ರೆ, ಉಪಮುಖ್ಯಂತ್ರಿ ಲಕ್ಷ್ಮಣ ಸವದಿ ಮಾತ್ರ ಸಮಾರಂಭದಲ್ಲಿ ಕಾಣಿಸಲೇ ಇಲ್ಲ. 

ಲಕ್ಷ್ಮಣ ಸವದಿಗೆ ಡಬಲ್ ಶಾಕ್: ಟಿಕೆಟ್ ಇಲ್ಲ, ಡಿಸಿಎಂ ಹುದ್ದೆಯೂ ಹೋಗುತ್ತಲ್ಲಾ..?

ಇದು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗೆ ಗ್ರಾಸವಾಗಿದೆ. ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಮಹೇಶ್ ಕುಮಟಳ್ಳಿ ಆಗಮನದಿಂದ ಸವದಿ ಸೈಡ್ ಲೈನ್ ಆಗ್ತಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ.

 ಯಾರ ಕೃಪಾಕಟಾಕ್ಷದಿಂದ ಸವದಿ ಮಂತ್ರಿಯಾದರೋ ಈಗ ಅವರೇ ಸವದಿ ಅವರ ರಾಜಕೀಯ ಭವಿಷ್ಯ ಉಳಿಸಬೇಕಾಗಿದೆ. ಇಲ್ಲವಾದಲ್ಲಿ ಸವದಿ ಮತ್ತೆ ಒಂಟಿಯಾಗಲಿದ್ದಾರೆ. ಕೊನೆಯದಾಗಿ ಸವದಿ ಅವರ ಮುಂದೆ ಹೈಕಮಾಂಡ್ ಹಾದಿ ಮಾತ್ರ ಉಳಿದಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Video Top Stories