ಸದಾನಂದ ಗೌಡರ ನಂತರ ಯತ್ನಾಳ್‌ಗೆ ಭರ್ಜರಿ ಠಕ್ಕರ್ ಕೊಟ್ಟ ಸ್ವಪಕ್ಷದ ನಾಯಕ!
ಯತ್ನಾಳ್ ವಿರುದ್ಧ ಡಿಸಿಎಂ ಗರಂ/ ನಾಯಕತ್ವ ಬದಲಾವಣೆ ಮಾತುಗಳನ್ನು ಆಡುವುದು ಸರಿ ಅಲ್ಲ/ ಕೇಂದ್ರ ನಾಯಕರು ಎಲ್ಲವನ್ನು ನೋಡುತ್ತಿದ್ದಾರೆ
ಬೆಂಗಳೂರು, (ಡಿ.25): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಸದಾನಂದಗೌಡ, ಎಂಎಲ್‌ಸಿ ರವಿಕುಮಾರ್, ಡಿಸಿಎಂ ಅಶ್ವಥ್ ನಾರಾಯಣ ಹರಿಹಾಯ್ದಿದ್ದಾರೆ.
ಯತ್ನಾಳ್ ನಡೆಗೆ ಕೇಂದ್ರ ನಾಯಕರ ಕೆಂಡ
ಯತ್ನಾಳ್ ಅವರ ಮಾತು ಮತ್ತು ನಡೆಯನ್ನು ಕೇಂದ್ರ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.