ಸಿಎಂ ಸಿದ್ದರಾಮಯ್ಯಗೆ ಡಿಕೆಶಿ ರಕ್ಷಾ ಕವಚ ಆಗಿದ್ದೇಕೆ? ಏನಿದರ ಮರ್ಮ.!

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿರುವಾಗ ಡಿಕೆ ಶಿವಕುಮಾರ್ ಬೆಂಬಲ ನೀಡಿದ್ದಾರೆ. ಇದಕ್ಕೆ ರಾಜಕೀಯ ಕಾರಣ, ಭವಿಷ್ಯದ ಪರಿಣಾಮಗಳ ಮಾಹಿತಿ ಇಲ್ಲಿದೆ ನೋಡಿ..

First Published Aug 19, 2024, 8:28 PM IST | Last Updated Aug 19, 2024, 8:34 PM IST

ಬೆಂಗಳೂರು (ಆ.19): ಮುಡಾ ಹಗರಣದಿಂದ ಸೃಷ್ಟಿಯಾಗಿರೋ ಸಂಕಷ್ಟ ವ್ಯೂಹದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ.. ಆದರೆ, ಈಗ ಅವರಿಗೆ ರಕ್ಷಾಕವಚ ನೀಡೋಕೆ ಡಿಸಿಎಂ ಡಿಕೆ ಶಿವಕುಮಾರ್ ನಿಂತು ಬಿಟ್ಟಿದ್ದಾರೆ.  ಎದುರಾಳಿಗಳು ಹೆಣೆದಿರೋ ಷಡ್ಯಂತ್ರದ ವಿರುದ್ಧ, ಹೋರಾಟದ ಶಪಥ ಮಾಡಿ, ರಣತಂತ್ರವೊಂದನ್ನ ಸಿದ್ಧಗೊಳಿಸಿದ್ದಾರೆ. ಸಿದ್ದರಾಮಯ್ಯ ಬೆನ್ನಹಿಂದೆ, ಕನಕಪುರದ ಬಂಡೆ ಗಟ್ಟಿಯಾಗಿ ನಿಂತದ್ದೇಕೆ  ಅನ್ನೋ ಸಂಗತಿಯಂತೂ, ಕದನ ಕುತೂಹಲವನ್ನೇ ಮೂಡಿಸಿಬಿಟ್ಟಿದೆ.

ಅವತ್ತು ಡಿಕೆ ಶಿವಕುಮಾರ್ ಕಷ್ಟದಲ್ಲಿದ್ದರು. ಆಗ ಸಿದ್ದರಾಮಯ್ಯ ಅವರು ಡಿಕೆಶಿ ಬೆನ್ನಿಗೆ ನಿಂತು ಸಪೋರ್ಟ್ ಮಾಡಿದ್ದರು. ಇವತ್ತು ಸಿದ್ದರಾಮಯ್ಯನೋರು ಕಷ್ಟದಲ್ಲಿದ್ದಾರೆ. ಹಾಗಾಗಿ ಡಿ.ಕೆ. ಶಿವಕುಮಾರ್ ಜೊತೆ ನಿಲ್ಲೋ ಮಾತಾಡ್ತಿದಾರೆ. ಅಂದರೆ ಡಿಕೆಶಿ ಋಣಸಂದಾಯ ಮಾಡ್ತಾ ಇದಾರೆ. ಆದರೆ, ಇದು ಇಷ್ಟು ಸುಲಭದ ಕತೆ ಅಲ್ಲ. ಅಸಲಿ ರಾಜಕಾರಣದ ಕತೆ ಆರಂಭವಾಗೋದೇ ಇಲ್ಲಿಂದ ಮುಂದೆ. ಸಿದ್ದರಾಮಯ್ಯ ಅವರ ವಿರುದ್ಧ ಇದೇ ಮೊದಲ ಬಾರಿಗೆ ತನಿಖೆಯೊಂದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಇದನ್ನ ಕಾಂಗ್ರೆಸ್ ಪಾಳಯ ವಿರೋಧಿಸ್ತಾ ಇದೆ. ರಾಜ್ಯಪಾಲರ ಆದೇಶದ ವಿರುದ್ಧ ಪ್ರತಿಭಟನೆಗೂ ಮುಂದಾಗಿದೆ. ಇದೆಲ್ಲದರ ನೇತೃತ್ವ ವಹಿಸಿಕೊಂಡಿರೋದು ಮಾತ್ರ ಡಿ.ಕೆ. ಶಿವಕುಮಾರ್. ಇದರ ಹಿಂದೆ ಒಂದು ಗುಟ್ಟಿದೆ. ಅದೇನು ಗೊತ್ತಾ? ಇಲ್ಲಿರೋ ವಿಡಿಯೋ ನೋಡಿ ಫುಲ್ ಡಿಟೇಲ್ಸ್ ಸಿಗುತ್ತದೆ.

Video Top Stories