Asianet Suvarna News

ರಾಹುಲ್-ಡಿಕೆಶಿ ಭೇಟಿ ಅಂತ್ಯ: ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಬಗ್ಗೆ ಚರ್ಚೆ

Jun 22, 2021, 4:28 PM IST

ಬೆಂಗಳೂರು, (ಜೂನ್.22): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವದ ಬಗ್ಗೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಇಂದು (ಮಂಗಳವಾರ) ದೆಹಲಿಯಲ್ಲಿ ರಾಹುಲ್​ ಗಾಂಧಿಯನ್ನ ಭೇಟಿ ಮಾಡಿದರು

ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯ ದಿಲ್ಲಿ ಚಲೋ: ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ

ಡಿ.ಕೆ. ಶಿವಕುಮಾರ್​​  ಅವರು ರಾಹುಲ್​ ಗಾಂಧಿ ಜೊತೆ 45 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ..