ಸಿಂಧಗಿಯಲ್ಲಿ ಝಣಝಣ ಕಾಂಚಾಣ: ಬಿಜೆಪಿ ಮುಖಂಡನಿಂದ ಹಣ ಹಂಚಿಕೆ ಆರೋಪ

ಸಿಂಧಗಿಯಲ್ಲಿ ಬಿಜೆಪಿ ಮುಖಂಡರು ಮತದಾರರಿಗೆ ಹಣವನ್ನು ಹಂಚುವ ವಿಡಿಯೋ ವೈರಲ್‌ ಆಗಿದೆ.
 

First Published May 7, 2023, 1:25 PM IST | Last Updated May 7, 2023, 1:25 PM IST

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತದಾರರಿಗೆ ಅಭ್ಯರ್ಥಿಗಳು ಆಮಿಷವನ್ನು ಒಡ್ಡುತ್ತಿದ್ದಾರೆ. ಸಿಂಧಗಿ ತಾಲೂಕಿನಲ್ಲಿ ಬಿಜೆಪಿ ಮುಖಂಡರು ಮತದಾರರಿಗೆ ಹಣವನ್ನು ಹಂಚುವ ವಿಡಿಯೋ ವೈರಲ್‌ ಆಗಿದೆ. ಬಿಜೆಪಿ ಅಭ್ಯರ್ಥಿ ರಮೇಶ್‌ ಬೂಸನೂರ ಪರ ಬಿಜೆಪಿ ಮುಖಂಡರು ಹಣವನ್ನು ಹಂಚುತ್ತಿದ್ದರು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನೂ ವಿಜಯಪುರದ ಬಬಲೇಶ್ವರದಲ್ಲಿ ನಟಿ ರಮ್ಯಾ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ. ಪಾಟೀಲ್‌ ಪರ ಮತಯಾಚನೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಮೋದಿಯನ್ನು ನೋಡುವುದಕ್ಕಾಗಿಯೇ ಜನ ಬರುತ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

Video Top Stories