Asianet Suvarna News Asianet Suvarna News

ಅವನಿಗೆ ಪ್ಯಾಂಟ್‌ ಬಿಚ್ಚಕ್ಕೆ ನಾ ಹೇಳಿದ್ನಾ? ಡಿಕೆಶಿ ಏಕವಚನದಲ್ಲೇ ಪ್ರಶ್ನೆ

ಸಿಡಿ ಕೇಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ಅವರ ಕೈವಾಡವಿದೆ ಎಂದು ರಮೇಶ್‌ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ.? ನಮ್ಮ ಕಾಂಗ್ರೆಸ್ ಪಾರ್ಟಿ ಹಾಳು ಮಾಡಿದ್ದೇ ಅವನು.

ಬೆಂಗಳೂರು (ಜ.25): ಸಿಡಿ ಕೇಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ಅವರ ಕೈವಾಡವಿದೆ ಎಂದು ರಮೇಶ್‌ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ.? ನಮ್ಮ ಕಾಂಗ್ರೆಸ್ ಪಾರ್ಟಿ ಹಾಳು ಮಾಡಿದ್ದೇ ಅವನು. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರ ಬೀಳಿಸಿದ್ದನಲ್ಲಪ್ಪಾ. ಅದೇನೋ ತನಿಖೆ ಮಾಡಿಸ್ತೀನಿ ಅಂದ್ನಲ್ಲಾ ಮಾಡಿಸೋಕೆ ಹೇಳಿ. ಸಿಬಿಐ ತನಿಖೆ ಮಾಡಿಸೋಕೆ ಹೇಳಿ ಎಂದು ರಮೇಶ್‌ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. 

ಇನ್ನು ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂಬ ಹೇಳಿಕೆ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಆ ಕೆಳಮಟ್ಟದ ಶಬ್ದಗಳ ಉಪಯೋಗ ಬೇಡ. ಮನುಷ್ಯನ ಪರ್ಸನಲ್ ಲೈಫ್ ಎಲ್ಲರಿಗೂ ಇರುತ್ತದೆ. ಅದರ ಬಗ್ಗೆ ಪದೇಪದೇ ಚರ್ಚೆ ಮಾಡೋದು ಬೇಡ. ಡಿ.ಕೆ.ಶಿವಕುಮಾರ್ ತಲೆ ಔಟ್ ಆಗಿದೆ ಅವರ ತಲೆ ಸರಿ ಇಲ್ಲ. ಪದೇಪದೇ ಟೀಕೆ ಮಾಡಿದ್ರೆ ನಾವು ಸಣ್ಣವರಾಗುತ್ತೀವಿ. ಅವನು ಕೆಳಮಟ್ಟಕ್ಕೆ ಇಳಿದಿದ್ದಾನೆ. 2008ರ ಶಿವಕುಮಾರ್ ಆಗಿ ಉಳಿದಿಲ್ಲ. ಗ್ರಾಮೀಣ ಶಿವಕುಮಾರ್ ಆಗಿ ಅಷ್ಟೇ ಉಳಿದಿದ್ದಾನೆ ಅವನು. ಈಗಾಗಲೇ ಬಹಳಷ್ಟು ಮಾತನಾಡಿದ್ದೀನಿ, ಪ್ರತಿಯೊಂದು ಶಬ್ದಕ್ಕೂ ಬದ್ಧನಾಗಿದ್ದೇನೆ ಎಂದು ತಿಳಿಸಿದರು.