‘ಬೆಂಗ್ಳೂರು ಜನ ಪಾರ್ಟಿ ನೋಡಲ್ಲ, ಅಭಿವೃದ್ಧಿ ಮಾತ್ರ ನೋಡ್ತಾರೆ’
14, Nov 2019, 4:27 PM IST
ಬೆಂಗಳೂರು (ನ.14): 15 ಮಂದಿ ಅನರ್ಹ ಶಾಸಕರು ತಾವರೆ ಹಿಡಿದಿದ್ದಾರೆ. ಅವರಲ್ಲಿ ರಾಜರಾಜೇಶ್ವರಿ ನಗರ ಮಾಜಿ ಶಾಸಕ ಮುನಿರತ್ನ ಕೂಡಾ ಒಬ್ಬರು. ಅವರ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮುನಿರತ್ನ ಸುವರ್ಣನ್ಯೂಸ್ ಜೊತೆ ಮಾತನಾಡಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...
ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.