Asianet Suvarna News Asianet Suvarna News

ಕೊರೊನಾ ಇದ್ರೂ ಸದನಕ್ಕೆ ಖರ್ಗೆ ಹಾಜರ್; ಪ್ರಿಯಾಂಕ್‌ಗಿಲ್ಲ ಕ್ವಾರಂಟೈನ್ ನಿಯಮ?

ಒಂದು ವಾರದಲ್ಲಿ ಕೊರೋನಾ ಸೋಂಕಿನಿಂದ ಕರ್ನಾಟಕ ಮೂವರು ಪ್ರತಿನಿಧಿಗಳನ್ನು ಕಳೆದುಕೊಂಡಿದೆ. ಕೋವಿಡ್‌ ಬಗ್ಗೆ ಇದು ನಮಗೆಲ್ಲಾ ಎಚ್ಚರಿಕೆಯ ಗಂಟೆಯೂ ಹೌದು. ಆದರೆ ಜನಪ್ರತಿನಿಧಿಗಳೇ ಇದನ್ನು ಮರೆತು, ಬೇಜವಾಬ್ದಾರಿಯಿಂದ ವರ್ತಿಸಿದರೆ ಜನರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ ಎಂಬ ಪ್ರಶ್ನೆ ಈಗ ಪ್ರಿಯಾಂಕ್ ಖರ್ಗೆಯವರ ವರ್ತನೆಯಿಂದ ಎದ್ದಿದೆ. 
 

ಬೆಂಗಳೂರು (ಸೆ. 25): ಒಂದು ವಾರದಲ್ಲಿ ಕೊರೋನಾ ಸೋಂಕಿನಿಂದ ಕರ್ನಾಟಕ ಮೂವರು ಪ್ರತಿನಿಧಿಗಳನ್ನು ಕಳೆದುಕೊಂಡಿದೆ. ಕೋವಿಡ್‌ ಬಗ್ಗೆ ಇದು ನಮಗೆಲ್ಲಾ ಎಚ್ಚರಿಕೆಯ ಗಂಟೆಯೂ ಹೌದು. ಆದರೆ ಜನಪ್ರತಿನಿಧಿಗಳೇ ಇದನ್ನು ಮರೆತು, ಬೇಜವಾಬ್ದಾರಿಯಿಂದ ವರ್ತಿಸಿದರೆ ಜನರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ ಎಂಬ ಪ್ರಶ್ನೆ ಈಗ ಪ್ರಿಯಾಂಕ್ ಖರ್ಗೆಯವರ ವರ್ತನೆಯಿಂದ ಎದ್ದಿದೆ. 

ಅಧಿವೇಶನಕ್ಕೂ ಮುನ್ನವೇ ಶಾಸಕ ಪ್ರಿಯಾಂಕ್‌ ಖರ್ಗೆಗೆ ಕೊರೊನಾ

ವಿಧಾನಮಂಡಲ ಅಧಿವೇಶನಕ್ಕೆ ಎರಡು ದಿನ ಮುನ್ನ ಕೋವಿಡ್ ಟೆಸ್ಟ್ ನಡೆಸಿದಾಗ ಪಾಸಿಟಿವ್ ಬಂದಿದೆ.  ಕ್ವಾರಂಟೈನ್ ಪೂರ್ಣಗೊಳಿಸದೇ ಸದನಕ್ಕೆ ಹಾಜರಾಗಿರುವುದು ಚರ್ಚೆಗೆ ಕಾರಣವಾಗಿದೆ. 

ಮೊದಲು ಪಾಸಿಟಿವ್ ಬಂದಿತ್ತು. ಆದರೆ ರೋಗ ಲಕ್ಷಣವಿಲ್ಲದಿದ್ದರಿಂದ ನೆಗೆಟಿವ್ ಬಂದಿದೆ. ಆದರೂ ಕನಿಷ್ಠ 14 ದಿನ ಕ್ವಾರಂಟೈನ್ ಅಗಬೇಕು. ಈ ನಿಯಮವನ್ನು ಗಾಳಿಗೆ ತೂರಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸದನಕ್ಕೆ ಹಾಜರಾಗಿ ಚರ್ಚೆಗೆ ಕಾರಣರಾಗಿದ್ದಾರೆ. ಈ ಬಗ್ಗೆ ಖರ್ಗೆಯವರು, ಸುವರ್ಣ ನ್ಯೂಸ್‌ಗೆ ಕೊಟ್ಟ ಸ್ಪಷ್ಟನೆ ಹೀಗಿದೆ. 
 

Video Top Stories