Asianet Suvarna News Asianet Suvarna News

'ಡಿಫೆನ್ಸ್‌ ಫೋರ್ಸ್‌ ಔಟ್‌ಸೋರ್ಸ್‌ ಮಾಡಿ ರಕ್ಷಣಾ ವ್ಯವಸ್ಥೆ ನಿರ್ನಾಮ ಮಾಡಕ್ಕೆ ಬಿಜೆಪಿ ಹೊರಟಿದೆ'

 ಅಗ್ನಿಪಥ ಯೋಜನೆ ವಿರುದ್ಧ ಎಐಸಿಸಿ ವತಿಯಿಂದ ದೆಹಲಿಯಲ್ಲಿ ಬುಧವಾರ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯದ ನೂರಾರು ಕಾಂಗ್ರೆಸ್ಸಿಗರು ದೆಹಲಿ ತಲುಪಿದ್ದಾರೆ. 

ಬೆಂಗಳೂರು (ಜೂ. 22):  ಅಗ್ನಿಪಥ ಯೋಜನೆ ವಿರುದ್ಧ ಎಐಸಿಸಿ ವತಿಯಿಂದ ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯದ ನೂರಾರು ಕಾಂಗ್ರೆಸ್ಸಿಗರು ದೆಹಲಿ ತಲುಪಿದ್ದಾರೆ. ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Interview: ಅಗ್ನಿಪಥ್ ಸ್ಕೀಂ ಹಾಗೂ ಇಡಿ ಕೇಸ್: ಬಹಳಷ್ಟು ವಿಚಾರ ಮಾತನಾಡಿದ ಓಂ ಬಿರ್ಲಾ

ಇ.ಡಿ, ಸಿಬಿಐಗಳನ್ನು ಬಳಸಿಕೊಂಡು ದೇಶದಲ್ಲಿ ವಿರೋಧ ಪಕ್ಷವನ್ನು, ಸ್ವತಂತ್ರ ಮಾಧ್ಯಮಗಳನ್ನು ದಮನ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಡಿಫೆನ್ಸ್‌ ಫೋರ್ಸ್‌ ಔಟ್‌ಸೋರ್ಸ್‌ ಮಾಡಿ ರಕ್ಷಣಾ ವ್ಯವಸ್ಥೆ ನಿರ್ನಾಮ ಮಾಡಕ್ಕೆ ಬಿಜೆಪಿ ಹೊರಟಿದೆ. ಇದರ ವಿರುದ್ಧ ನಾವು ಪ್ರತಿಭಟಿಸುತ್ತೇವೆ. ನ್ಯಾಷನಲ್ ಹೆರಾಲ್ಡ್ 8 ವರ್ಷಗಳಿಂದ ತನಿಖೆಯಲ್ಲಿದೆ. ಈ 8 ವರ್ಷಗಳಲ್ಲಿ ಒಂದೇ ಒಂದು ಚಾರ್ಜ್ ಸಾಬೀತುಪಡಿಸಲು ಸಾಧ್ಯವಾಯ್ತಾ..? ಸಣ್ಣದೊಂದು ಸಾಕ್ಷಿಯನ್ನೂ ನಿಮಗೆ ಕೊಡಲು ಸಾಧ್ಯವಾಗಲಿಲ್ಲ' ಎಂದು ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು. 

Video Top Stories