Asianet Suvarna News Asianet Suvarna News

ಶತಮಾನದ ದೊಡ್ಡ ಹಗರಣ, ಕಾಂಗ್ರೆಸ್‌ಗೆ ಸಿಕ್ಕ ದಾಖಲೆಗಳ ಮೂಲ ಹೇಳಿದ ಉಗ್ರಪ್ಪ

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಗುಡುಗು/ ಲೆಕ್ಕ ಕೊಡಿ ಎಂದು ಕೇಳಿದ ಕಾಂಗ್ರೆಸ್/ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ/ ಕೊರೋನಾ ವಸ್ತು ಖರೀದಿಯಲ್ಲಿ ಭಾರೀ ಅವ್ಯವಹಾರ/ ದಾಖಲೆಗಳ ಮೂಲ ಹೇಳಿದ  ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ

ಬೆಂಗಳೂರು (ಜು. 23) ಕೊರೋನಾಕ್ಕೆ ಸಂಬಂಧಿಸಿ ವೈದ್ಯಕೀಯ ಸಾಮಗ್ರಿ  ಖರೀದಿ ವಿಚಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಭ್ರಷ್ಟಾಚಾರದ ವಾಸನೆ ಬರ್ತಿದೆ ಅಂದರೆ ಸುಮ್ಮನೆ ಕೂರಬೇಕಾ?

ದಾಖಲೆಗಳನ್ನು ಕಾಂಗ್ರೆಸ್ ಸಿದ್ಧ ಮಾಡಿಲ್ಲ, ಸರ್ಕಾರದ ವಿವಿಧ ಇಲಾಖೆಗಳ ಮೂಲಕವೇ ಈ ದಾಖಲೆ ತರಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕ ವಿಎಎಸ್ ಉಗ್ರಪ್ಪ ತಿಳಿಸಿದ್ದಾರೆ. ಈ ಶತಮಾನದ ಅತಿದೊಡ್ಡ ಹಗರಣ ಎಂದು ಉಗ್ರಪ್ಪ ವ್ಯಾಖ್ಯಾನಿಸಿದ್ದಾರೆ.

Video Top Stories