'ಕೈ' 2ನೇ ಪಟ್ಟಿಯಲ್ಲೂ ಕೋಲಾರದ ಟಿಕೆಟ್ ಸಸ್ಪೆನ್ಸ್.. ಸಿದ್ದುಗೆ ಸೆಕೆಂಡ್ ಚಾನ್ಸ್..?
ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಗೆ 2 ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪಣ ತೊಟ್ಟಿದ್ದಾರೆ. ಅದರಲ್ಲೂ ಕೊಲಾರ ಕ್ಷೇತ್ರದ ಮೇಲೆ ಸಿದ್ದು ಕಣ್ಣಿದೆ. ಹಾಗಾದರೆ ಕಾಂಗ್ರೆಸ್ ಹೈಕಮಾಂಡ್ ಇನ್ನು ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನ ಅನೌನ್ಸ್ ಮಾಡಿಲ್ಲ ಯಾಕೆ ..?
ಸಿದ್ದರಾಮಯ್ಯ ಹಳೆ ಮೈಸೂರು ಭಾಗ ಮಾತ್ರವಲ್ಲದೇ ಇಡಿ ರಾಜ್ಯಾದ್ಯಂತ ತನ್ನ ಪ್ರಭಾವ ಹೊಂದಿರುವ ಜನಪ್ರಿಯ ನಾಯಕ. ಅಹಿಂದ ಮತಗಳ ಮೇಲೆ ಅಧಿಪತ್ಯ ಸಾಧಿಸಿರುವ ರಾಜಕೀಯ ಚಾಣಾಕ್ಷ. ಕರ್ನಾಟಕ ರಾಜಕಾರಣದ ಮೇಲೆ ತನ್ನದೇ ಆದ ಹಿಡಿತ ಹೊಂದಿರುವ ಸಿದ್ದರಾಮಯ್ಯಗೆ ಸದ್ಯ ಅಸೆಂಬ್ಲಿ ಚುನಾವಣೆ ಸ್ಪರ್ಧೆಗೆ ಕ್ಷೇತ್ರ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 2023ರ ವಿಧಾನಸಭೆ ಚುನಾವಣೆಗೆ ಬಾದಾಮಿ ತೊರೆದು ಕೋಲಾರದತ್ತ ಸಿದ್ದರಾಮಯ್ಯ ಮುಖ ಮಾಡಿದರು. ಇನ್ನು ಕೋಲಾರಕ್ಕಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದರು. ಆದರೆ ಹೈಕಮಾಂಡ್ ಸಮ್ಮತಿ ಸೂಚಿಸದ ಹಿನ್ನೆಲೆ ಸಿದ್ದು ಕೋಲಾರ ಕದನಕಣದಿಂದ ದೂರ ಸರಿದು ವರುಣಾದತ್ತ ಮುಖಮಾಡಿದರು.ವರುಣಾ ಕ್ಷೇತ್ರವನ್ನು ಖಚಿತಪಡಿಸಿಕೊಂಡ ಮೇಲೂ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಅಂತನು ಹೇಳಿದ್ದರು.ಹಾಗಾದ್ರೆ 2ನೇ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೋಲಾರದ ಅಭ್ಯರ್ಥಿಯ ಘೋಷಣೆ ಮಾಡಿಲ್ಲ ಯಾಕೆ..? ಒಂದು ವೇಳೆ ಕೋಲಾರ ಟಿಕೆಟ್ ಸಿದ್ದುಗೆ ಕೊಟ್ಟರೆ ಕಾಂಗ್ರೆಸ್‌ಗೆ ಆಗೋ ಲಾಭ ಏನು..? ಈ ವಿಡಿಯೋ ನೋಡಿ