ಕಾಂಗ್ರೆಸ್ 2 ಗ್ಯಾರೆಂಟಿ ನಾಳೆಯಿಂದ ಜಾರಿ, ಉಚಿತ ಅಕ್ಕಿ, ವಿದ್ಯುತ್ ಪಡೆಯಲು ಏನು ಮಾಡಬೇಕು?
ಗ್ಯಾರೆಂಟಿ ಯೋಜನೆ ಜಾರಿ, ಉಚಿತ ಬೆಳಕು, ಅಕ್ಕಿ ನಾಳೆಯಿಂದ ಸೌಲಭ್ಯ, ಬಿಜೆಪಿ ತುರ್ತು ಸಭೆ, ಪಕ್ಷದ ನಾಯಕರಿಗೆ ಖಡಕ್ ವಾರ್ನಿಂಗ್, ನೋಟಿಸ್ ಕೊಟ್ಟ ಬಳಿಕವೂ ರೇಣುಕಾಚಾರ್ಯ ರೆಬೆಲ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ ಉಚಿತ ಗ್ಯಾರೆಂಟಿಗಳ ಪೈಕಿ 2 ಯೋಜನೆ ನಾಳೆಯಿಂದ ಜಾರಿಯಾಗುತ್ತಿದೆ. 5 ಕೆಜಿ ಉಚಿತ ಅಕ್ಕಿ ಹಾಗೂ ಉಚಿತ ವಿದ್ಯುತ್ ಯೋಜನೆ ನಾಳೆಯಿಂದ ಜಾರಿಯಾಗುತ್ತಿದೆ. ಸದ್ಯಕ್ಕೆ ಅಕ್ಕಿ ಇಲ್ಲದ ಕಾರಣ ಪ್ರತಿ ಕೇಜಿಗೆ 34 ರೂಪಾಯಿಯಂತೆ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಗೃಹ ಜ್ಯೋಜಿ ಉಚಿತ ಯೋಜನೆ ನಾಳೆಯಿಂದ ಜಾರಿಯಾಗಲಿದೆ. ಪ್ರತಿ ಮನೆಗೆ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆ ಲಾಭ ಪಡೆಯಲು ಜುಲೈ 15ಕ್ಕೆ ಅಂತಿಮ ದಿನವಾಗಿದೆ.ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದಂತೆ ನೀಡುತ್ತಿಲ್ಲ ಎಂದು ಬಿಜೆಪಿ ಹೇಳಿದೆ. ಇದೀಗ ಸದನದ ಹೊರಗೆ ಹಾಗೂ ಒಳಗೆ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.