Asianet Suvarna News Asianet Suvarna News

Karnataka Politics: ಕುರುಕ್ಷೇತ್ರ ಗೆಲ್ಲಲು ಬೊಮ್ಮಾಯಿ ವ್ಯೂಹ, ರಾಜಾಹುಲಿ ಸಾಥ್

ಮಹಾಕಾಳಗದಲ್ಲಿ ಕೈ ಕಟ್ಟಾಳುಗಳನ್ನು ಕಟ್ಟಿ ಹಾಕಲು ವಿಜಯದಶಮಿಯಂದೇ ತಂತ್ರ ರೂಪಿಸಿದ್ದಾರೆ. ಗುರು ಶಿಷ್ಯ ಸೇರಿ ಹಾಕಿರುವ ಪ್ಲಾನ್ ಏನೋ ರಣವ್ಯೂಹದ ಅಸಲಿ ಗುಟ್ಟೇನು ಎಂಬ ಡಿಟೇಲ್ ಈ ವಿಡಿಯೋದಲ್ಲಿದೆ.
 

Oct 6, 2022, 12:17 PM IST

ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೆ ಈಗಿನಿಂದಲೇ ಸರ್ವಪಕ್ಷಗಳು ಸಿದ್ಧತೆ ನಡೆಸುತ್ತಿವೆ. ರಾಜ್ಯದ ಕುರುಕ್ಷೇತ್ರದವನ್ನು ಗೆಲ್ಲಲು ಕಾಂಗ್ರೆಸ್ ರಣೋತ್ಸಾಹದಲ್ಲಿದ್ದರೆ ಇತ್ತ ಕೈ ಪಾಳೆಯಕ್ಕೆ ಟಕ್ಕರ್ ಕೊಡಲು ಅಖಾಡಕ್ಕಿಳಿಯಲಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ. ಬೊಮ್ಮಾಯಿಗೆ ರಾಜಹುಲಿ ಬಿಎಸ್‌ವೈ ಶ್ರೀರಕ್ಷೆ ಇದ್ದು, ಗುರು ಶಿಷ್ಯರು ಸೇರಿ ಯುದ್ಧ ಗೆಲ್ಲುವ ರಣೋತ್ಸಾಹದಲ್ಲಿದ್ದು, ಮಹಾಕಾಳಗದಲ್ಲಿ ಕೈ ಕಟ್ಟಾಳುಗಳನ್ನು ಕಟ್ಟಿ ಹಾಕಲು ವಿಜಯದಶಮಿಯಂದೇ ತಂತ್ರ ರೂಪಿಸಿದ್ದಾರೆ. ಗುರು ಶಿಷ್ಯ ಸೇರಿ ಹಾಕಿರುವ ಪ್ಲಾನ್ ಏನೋ ರಣವ್ಯೂಹದ ಅಸಲಿ ಗುಟ್ಟೇನು ಎಂಬ ಡಿಟೇಲ್ ಈ ವಿಡಿಯೋದಲ್ಲಿದೆ.