ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣ: ಸಿಎಂ ಸಿದ್ದರಾಮಯ್ಯ

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡ್ತಿದೆ, 12ನೇ ತಾರೀಕು ಒಪ್ಪಿಕೊಂಡು 14ನೇ ತಾರೀಕಿಗೆ ಇಲ್ಲ ಅಂತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

First Published Jun 18, 2023, 8:43 PM IST | Last Updated Jun 18, 2023, 8:43 PM IST

ಬೆಂಗಳೂರು (ಜೂ.18): ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡ್ತಿದೆ, 12ನೇ ತಾರೀಕು ಒಪ್ಪಿಕೊಂಡು 14ನೇ ತಾರೀಕಿಗೆ ಇಲ್ಲ ಅಂತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಅಕ್ಕಿ ಇದ್ದರೆ ಕೊಡಿಸಿ, ಬಡವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಯಾಕೆ ಅಂತಾ ಪ್ರಶ್ನಿಸಿದ್ದಾರೆ. ಹೆಚ್ಚುವರಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಮೊದಲು ಭಾರತೀಯ ಆಹಾರ ನಿಗಮ ಅಕ್ಕಿ ನೀಡುವುದಾಗಿ ಹೇಳಿತ್ತು. ಜೂನ್​ 12ರಂದು ಎಫ್​​ಸಿಐ ಕೂಡ ಪತ್ರ ಬರೆದಿತ್ತು. ಆದರೆ ಇದೀಗ ಎಫ್​ಸಿಐ ಅಕ್ಕಿ ನೀಡಲಾಗಲ್ಲ ಎಂದು ಪತ್ರ ಬರೆದಿದೆ. ಬಡವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಯಾಕೆ? ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು. 

Video Top Stories