Asianet Suvarna News Asianet Suvarna News

ವಿಪಕ್ಷಗಳ ಅಸ್ತ್ರಕ್ಕೆ ಸಿದ್ಧವಾಗಿದೆ ಬೃಹತ್ ಬ್ರಹ್ಮಾಸ್ತ್ರ! 48 ಗಂಟೆಗಳಲ್ಲಿ ಛಿದ್ರವಾಗುತ್ತಾ ರಣತಂತ್ರ?

ವಾಲ್ಮೀಕಿ ನಿಗಮದ ಅಕ್ರಮ ಹಣವರ್ಗಾವಣೆ ಆರೋಪ , ಮುಡಾ ನಿವೇಶನ ಪ್ರಕರಣದ ಆರೋಪಗಳ ನಡುವೆ ಸಿಲಿಕಿರುವ ಸಿಎಂ ಸಿದ್ದರಾಮಯ್ಯ ರಕ್ಷಣೆಗೆ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ವಿಪಕ್ಷಗಳ ರಣತಂತ್ರ ಛಿದ್ರಗೊಳಿಸಲು ಮಹತ್ವದ ಪ್ಲಾನ್ ರೆಡಿಯಾಗಿದೆ.
 

First Published Aug 8, 2024, 1:48 PM IST | Last Updated Aug 8, 2024, 1:48 PM IST

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಲು ಸಾಲು ಕಂಟಕ ಎದುರಾಗಿದೆ.. ಅದರಿಂದ ಪಾರಾಗೋಕೆ ಏನು ಮಾರ್ಗ ಅಂತತ ಹುಡುಕಾಟ ಶುರುವಾಗಿದೆ.. ಸಿಎಮ್ ಪಾಲಿಗೆ ಎದುರಾಗಿರೋ ಟೆನ್ಷನ್ ಒಂದಲ್ಲಾ.. ಎರಡಲ್ಲಾ.. ವಿಪಕ್ಷಗಳ ಪಾದಯಾತ್ರೆ.. ಅಬ್ರಹಾಂ ಆರೋಪ.. ರಾಜ್ಯಪಾಲರ ನೋಟಿಸ್.. ಹೀಗೆ, ಚಕ್ರವ್ಯೂಹದ ಮಧ್ಯೆ ಸಿದ್ದರಾಮಯ್ಯ ಸಿಲುಕಿಕೊಂಡಿರೊ ಹಾಗೆ ಕಾಣ್ತಾ ಇದೆ.. ಇದನ್ನೆಲ್ಲಾ ಭೇದಸೋಕೆ ಸಿದ್ದರಾಮಯ್ಯನವರ ಕಸರತ್ತು ಹೇಗಿದೆ? ಮುಂದಿನ 48 ಗಂಟೆಗಳಲ್ಲಿ ಏನಾಗಲಿದೆ..?

Video Top Stories