Asianet Suvarna News Asianet Suvarna News
breaking news image

News Hour: ಸಿಎಂ ಸಿದ್ಧರಾಮಯ್ಯ ಬುಡಕ್ಕೆ ಬಂದ ಮುಡಾ, ಹೊಸ ಟ್ವಿಸ್ಟ್‌ ಕೊಟ್ಟ ಎಚ್‌ಡಿಕೆ!

ಮುಡಾ ಸೈಟ್ ವಿವಾದಕ್ಕೆ ಕುಮಾರಸ್ವಾಮಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರ ಷಡ್ಯಂತ್ರ ಎಂದು ಆರೋಪ​  ಮಾಡಿದ್ದಾರೆ.  ನನ್ನ ನೆನಪಿಸಿಕೊಳ್ಳದಿದ್ರೆ ನಿದ್ದೆ ಬರಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
 

ಬೆಂಗಳೂರು (ಜು.5): ಸಿದ್ದರಾಮಯ್ಯ ಸರ್ಕಾರಕ್ಕೆ ‘ಮುಡಾ’ ಸೈಟ್ ಸಂಕಷ್ಟ ಶುರುವಾಗಿದೆ. 62 ಕೋಟಿ ಭೂಮಿ ಕೊಟ್ಟಿದ್ದೇವೆ.. ಪರಿಹಾರ ಕೊಡಿಸಿ ಎಂದು ಸಿಎಂ ಹೇಳಿದ್ದಾರೆ. ಆ ಭೂಮಿ ಮೂಲ ಮಾಲೀಕ ದಲಿತರು ಎಂದು ಎಚ್‌ ವಿಶ್ವನಾಥ್‌ ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ಬೇರೆ ಏನು ಕೆಲಸವೇ ಇಲ್ಲ. ಆರ್​ಎಸ್​​ಎಸ್​ನವರು ಹೇಳಿದಂತೆ ಬಿಜೆಪಿ ಕೇಳ್ತಿದೆ. ನಮ್ಮ ಭೂಮಿ 3.16 ಎಕರೆ ಒತ್ತುವರಿ ಮಾಡಿದ್ದಾರೆ. ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿದ್ದೇವಾ? ಬಿಜೆಪಿಗರೇ ಕೊಟ್ಟು ಅವರೇ ಆರೋಪ ಮಾಡಿದ್ರೆ. ಈಗ ಕಾನೂನುಬಾಹಿರ ಎಂದು ಹೇಳಿದ್ರೆ ಹೇಗೆ..? ಎಂದು ಪ್ರಶ್ನೆ ಮಾಡಿದ್ದಾರೆ.

MUDA scam: 'ಏಯ್ ಯಾರ್ರೀ ಅವ್ನು ವಿಶ್ವನಾಥ್..' ಹಳ್ಳಿಹಕ್ಕಿ ವಿರುದ್ಧ ರೊಚ್ಚಿಗೆದ್ದ ಬೈರತಿ ಸುರೇಶ್!

ಇನ್ನೊಂದೆಡೆ ಎಚ್​ ವಿಶ್ವನಾಥ್, ಸಿಎಂ ತಮಗೆ 62 ಕೋಟಿ ರೂ. ಬರಬೇಕು ಅಂತಾರೆ. ಸಿಎಂ ಪತ್ನಿ ಖರೀದಿಸಿರುವ ದೇವನೂರು ಬಡಾವಣೆ ಜಾಗ ದಲಿತರಿಗೆ ಸೇರಿದ್ದು. ಜವರ ಎಂಬ ವ್ಯಕ್ತಿಗೆ ಸೇರಿದ ಜಮೀನು ಅದು. ಡಿನೋಟಿನೋಫೈ ಆದ ಜಾಗ ಸಿಎಂ ಪತ್ನಿ ಅಣ್ಣ ಖರೀದಿಸಿದ್ರು. 2005ರಲ್ಲಿ ದಲಿತರಿಂದ ಜಮೀನು ಖರೀದಿ ಮಾಡಿದ್ದಾರೆ. ನಿಮ್ಮ ಜಾಗಕ್ಕೆ 6 ಕೋಟಿ ಆಗಬಹುದು.  62 ಕೋಟಿ ಕೇಳ್ತಿದ್ದೀರಿ ಎಂದು ಹೇಳಿದ್ದಾರೆ.

Video Top Stories