Asianet Suvarna News Asianet Suvarna News

ತಾರತಮ್ಯ ನಿವಾರಣೆಗೆ ಮೂಲ ನಾಯಕರ ಮಾಸ್ಟರ್  ಪ್ಲಾನ್.. ಬಿಎಸ್‌ವೈಗೆ ಟ್ರಬಲ್?

ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಬೇಗುದಿ/ ಅಮಿತ್ ಶಾ ಬಳಿ ದೂರು ನೀಡಲು ಮೂಲ ನಾಯಕರ  ನಿರ್ಧಾರ/ ತಾರತಮ್ಯ ನಿವಾರಣೆಗೆ ಯಾವಾಗ? 

Jan 14, 2021, 9:29 PM IST

ಬೆಂಗಳೂರು( ಜ. 14 ) ಸಂಪುಟ ವಿಸ್ತರಣೆ ನಂತರ ಸಿಎಂಗೆ ಅಸಲಿ ತಲೆಬಿಸಿ ಶುರುವಾಗಿದೆ. ಕೇಸರಿಯಲ್ಲಿ ಬೇಗುದಿ ಧಗಧಗ ಅಂತಿದೆ. ಮೂಲ ನಾಯಕರ ಮುನಿಸು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆಯೋ ಗಿತ್ತಿಲ್ಲ.

'ಬಿಜೆಪಿ ಸೇರಿದ ಕೆಲವರು ಬಾಯಿ ಬಡ್ಕೋತಿರೋದು ಯಾಕೆ?'

ದೂರುಗಳ ಪಟ್ಟಿ ದೊಡ್ಡದಾಗಿದೆ.  ಜನವರಿ 17  ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಭೇಟಿ ನೀಡಲಿದ್ದು ಅನೇಕ  ಮೂಲ ನಾಯಕರು ದೂರು  ನೀಡಲು ಸಿದ್ಧವಾಗಿದ್ದಾರೆ.