News Hour: ಮಾರ್ಚ್​ 14- 15ಕ್ಕೆ ಚುನಾವಣೆ ಘೋಷಣೆ ಸಾಧ್ಯತೆ, ಮೇ.9ಕ್ಕೆ ಕರ್ನಾಟಕದಲ್ಲಿ ಮತದಾನ?

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ನಡುವೆ ಚುನಾವಣೆಯ ದಿನಾಂಕಗಳು ಮಾರ್ಚ್‌ 14 ಅಥವಾ 15ಕ್ಕೆ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
 

First Published Mar 9, 2024, 10:38 PM IST | Last Updated Mar 9, 2024, 10:38 PM IST


ನವದೆಹಲಿ (ಮಾ.9): ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೆ ಸಿದ್ಧತೆ ಆರಂಭಿಸಿದೆ. ಚುನಾವಣೆಯ ವೇಳೆ ಅತ್ಯಂತ ಪ್ರಮುಖವಾಗಿರುವ ಭದ್ರತಾ ಸಭೆ ಕೂಡ ಇತ್ತೀಚೆಗೆ ನಡೆದಿದೆ.

ಕೇಂದ್ರ ಚುನಾವಣಾ ಆಯೋಗ ಹಾಗೂ ಗೃಹ ಸಚಿವಾಲಯದ ಬಹಳ ಮುಖ್ಯ ಸಭೆ ನಡೆದಿದ್ದು, ಚುನಾವಣೆಗೆ ಸಿಗುವ ಸೇನಾಪಡೆಗಳು, ಅರೆಸೇನಾ ಪಡೆಗಳು, ಪೊಲೀಸ್‌ ಅಧಿಕಾರಿಗಳ ಮಾಹಿತಿಗಳನ್ನು ಪಡೆದುಕೊಂಡಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ತನ್ನ ಎಲ್ಲಾ ಇಲಾಖೆಗಳಿಗೆ ಮಾರ್ಚ್‌ 13ರ ಒಳಗಾಗಿ ಎಲ್ಲಾ ಅಭಿವೃದ್ಧಿ ಕಾರ್ಯಗಳ ಅನಾವರಣ ಮಾಡುವಂತೆ ಸೂಚನೆ ನೀಡಿದೆ.

Breaking: ಲೋಕಸಭೆ ಚುನಾವಣೆ ಹೊತ್ತಲ್ಲೇ ಚುನಾವಣಾ ಆಯುಕ್ತ ಅರುಣ್‌ ಗೋಯೆಲ್‌ ರಾಜೀನಾಮೆ

ಮಾರ್ಚ್​ 13ಕ್ಕೆ ಪ್ರಧಾನಿ ಮೋದಿ ಕೊನೆಯ ಸಂಪುಟ ಸಭೆ ನಡೆಯಲಿದೆ. ಮಾರ್ಚ್​ 14 ಅಥವಾ 15ಕ್ಕೆ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಹಾಲಿ ಸಂಪುಟದ ಕೊನೆಯ ಸಭೆಯಲ್ಲಿ ಮೋದಿ ಸರ್ಕಾರ ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.