ಸೀಡಿ ಕೇಸ್‌: ಡಿಕೆಶಿ ವಿರುದ್ಧ ಹೊಸ ಬಾಂಬ್‌ ಹಾಕಿದ ಸಾಹುಕಾರ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಈ ಹಿಂದೆ ಸದ್ದು ಮಾಡಿ ತಲೆದಂಡ ಪಡೆದಿದ್ದ ಸೀಡಿ ಪ್ರಕರಣ  ಈಗ ಮತ್ತೆ ಸದ್ದು ಮಾಡುತ್ತಿದೆ. ಮಹಾನಾಕನ ವಿರುದ್ಧ ಸಾಹುಕಾರ ಹೊಸ ಬಾಂಬ್ ಸಿಡಿಸಿದ್ದಾರೆ. ಸೀಡಿ ಹಿಂದೆ ಡಿಕೆಶಿ ಕೈವಾಡ ಇರೋದಕ್ಕೆ ಸಾಕ್ಷ್ಯವಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

First Published Jan 25, 2023, 3:22 PM IST | Last Updated Jan 25, 2023, 3:22 PM IST

ಬೆಳಗಾವಿ (ಜ.25): ರಾಜ್ಯ ರಾಜಕಾರಣದಲ್ಲಿ ಈ ಹಿಂದೆ ಸದ್ದು ಮಾಡಿ ತಲೆದಂಡ ಪಡೆದಿದ್ದ ಸೀಡಿ ಪ್ರಕರಣ  ಈಗ ಮತ್ತೆ ಸದ್ದು ಮಾಡುತ್ತಿದೆ. ಮಹಾನಾಕನ ವಿರುದ್ಧ ಸಾಹುಕಾರ ಹೊಸ ಬಾಂಬ್ ಸಿಡಿಸಿದ್ದಾರೆ. ಸೀಡಿ ಹಿಂದೆ ಡಿಕೆಶಿ ಕೈವಾಡ ಇರೋದಕ್ಕೆ ಸಾಕ್ಷ್ಯವಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷ ಹಾಳಾಗಿದ್ದು ರಮೇಶ್ ಜಾರಕಿಹೊಳಿಯಿಂದ ಎಂಬ ಡಿಕೆಶಿ ಹೇಳಿದ್ದಾರೆ. ಹೌದು ನಿಜ, ನಾನು ಚಾಲೇಂಜ್ ಮಾಡಿ ಮಾಡಿದೀನಿ. ಅವನ ಹಾಗೇ ನಾನು ಮೋಸ ಮಾಡಿಲ್ಲ, ಷಡ್ಯಂತ್ರ ಮಾಡಿಲ್ಲ. ನಾನು ಚಾಲೇಂಜ್ ಮಾಡಿ ಪಕ್ಷ ಬಿಡ್ತೀನಿ ಅಂತಾ ಹೇಳಿ ರಾಜೀನಾಮೆ ಕೊಟ್ಟಿದ್ದೇನೆ. ನಾನೇನೂ ಡೊಕ್ಕೊಂಡು (ಬಗ್ಗಿಕೊಂಡು), ಯಾವುದಾದರೂ ಹುಡುಗಿ ಕಳಿಸಿ ಕುತಂತ್ರ ಮಾಡಿಲ್ಲ. ಅದನ್ನ ಷಂಡರು ಮಾಡ್ತಾರೆ. ಮನುಷ್ಯರು ಮಾಡಲ್ಲ. ಯಾವಾಗಿದ್ದರೂ ಗಟ್ಟಿ ಮನುಷ್ಯ, ಸ್ಟ್ರಾಂಗ್ ಮನುಷ್ಯನನ್ನೇ ಮಾಡ್ತಾರೆ. ಅವನಕ್ಕಿಂತ ತಾಕತ್‌ ಇರೋನು ಇದ್ದರೆ ವೀಕ್ ಮಾಡಲು ಷಡ್ಯಂತ್ರ ಮಾಡ್ತಾನೆ. ನನ್ನಿಂದ ಅವನ ರಾಜಕಾರಣ ಅಂತ್ಯವಾಗೋದು ನೋಡ್ತಾ ಇರಿ ಎಂದು ಡಿಕೆ ಶಿವಕುಮಾರ್‌ಗೆ ಎಚ್ಚರಿಕೆ ನೀಡಿದ್ದಾರೆ.

Video Top Stories