Asianet Suvarna News Asianet Suvarna News

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಸಿ ಪಾಟೀಲ್ , ಕುಡಚಿ ರಾಜೀವ್ ನಡುವೆ ಜಟಾಪಟಿ

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಸಿ ಪಾಟೀಲ್ ಮತ್ತು ಶಾಸಕ ಕುಡಚಿ ರಾಜೀವ್ ನಡುವೆ ಜಟಾಪಟಿ ನಡೆದಿದೆ. 

Sep 21, 2021, 1:28 PM IST

ಬೆಂಗಳೂರು (ಸೆ. 21): ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಸಿ ಪಾಟೀಲ್ ಮತ್ತು ಶಾಸಕ ಕುಡಚಿ ರಾಜೀವ್ ನಡುವೆ ಜಟಾಪಟಿ ನಡೆದಿದೆ. 

ಶಾಸಕರ ಮೋಜು ಮಸ್ತಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್‌ಗೆ ಸರ್ಕಾರ ಅಸ್ತು..!

ತಾಂಡಾ ಅಭಿವೃದ್ಧಿ ನಿಗಮಕ್ಕೆ ಇದುವರೆಗೂ ಹಣ ಬಂದಿಲ್ಲ. ನಿಗಮಕ್ಕೆ ನೇರವಾಗಿ ಹಣ ನೀಡಿ ಎಂದು ಶಾಸಕ ರಾಜೀವ್ ಹೇಳುತ್ತಾರೆ. ಅವರ ಮಾತಿನಿಂದ ಗರಂ ಆದ PWD ಸಚಿವ ಸಿಸಿ ಪಾಟೀಲ್, PWD ಇಲಾಖೆಯನ್ನು ನೀನೇ ಇಟ್ಟುಕೋ ಎಂದು ರೇಗುತ್ತಾರೆ. 'ಶಾಸಕರ ಬೇಡಿಕೆ ಬಗ್ಗೆ ಮಾತನಾಡಲು ಈ ಸಭೆ ಇದೆ, ಸಮಾಧಾನವಾಗಿ ಮಾತನಾಡಿ' ಎಂದು ಬೊಮ್ಮಾಯಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.