News Hour: 'ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ..' ಟ್ರಾನ್ಸ್‌ಫರ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಎಚ್‌ಡಿಕೆ!
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಟ್ರಾನ್ಸ್‌ಫರ್ ಬಾಂಬ್ ಎಸೆದಿದ್ದಾರೆ. ಹಾಲಿ ಸರ್ಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ ಈಗಾಗಲೇ ಜಾರಿಯಾಗಿದೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರು (ಜೂ.28): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಟ್ರಾನ್ಸ್‌ಫರ್ ವಿಚಾರದಲ್ಲಿ ಕಿಡಿಕಾರಿದ್ದಾರೆ. ಒಂದೇ ಹುದ್ದೆಗೆ ನಾಲ್ವರ ಹೆಸರ ಶಿಫಾರಸು ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು 'ಕಾಸಿಗಾಗಿ ಪೋಸ್ಟಿಂಗ್' ಗ್ಯಾರಂಟಿ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಬುಧವಾರದ ಮಹತ್ವದ ಬೆಳವಣಿಗೆಯಲ್ಲಿ ಅನ್ನಭಾಗ್ಯದ ಅಕ್ಕಿ ದೊರೆಯುವವರೆಗೂ ಫಲಾನುಭವಿಗಳ ಖಾತೆಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ನೀಡುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿಯ ಹಣವನ್ನು ಪಡಿತರ ಚೀಟಿ ಹೊಂದಿರುವವರಿಗೆ ನೀಡೋದಾಗಿ ಸರ್ಕಾರ ಹೇಳಿದೆ.
ನಾವೇನು ದರೋಡೆ ಮಾಡಿ ದುಡ್ಡು ಕೊಡೋದಿಲ್ಲ, ಖಜಾನೆಯನ್ನ ಜನ ತುಂಬಿಸಿ ಇಟ್ಟಿದ್ದಾರೆ: ಎಚ್‌ಡಿ ಕುಮಾರಸ್ವಾಮಿ
ಅದಲ್ಲದೆ, ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಮತ್ತೊಂದು ಮಹತ್ವದ ಗ್ಯಾರಂಟಿಯಾಗಿರುವ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ಸದ್ಯಕ್ಕೆ ಶುರುವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದೇ 15 ರಿಂದ ಅರ್ಜಿ ಸ್ವೀಕಾರ ಆರಂಭವಾಗಬೇಕಿತ್ತು. ಆದರೆ, ಜುಲೈ 14 ರಿಂದ ಅರ್ಜಿ ಸಲ್ಲಿಕೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.