Asianet Suvarna News Asianet Suvarna News

'ಮಂತ್ರಿಯಾಗಿದ್ದವರನ್ನು ಮತ್ತೆ ಸಚಿವರನ್ನಾಗಿ ಮಾಡಬೇಡಿ, ನಮಗೂ ಅವಕಾಶ ಕೊಡ್ರಿ'

Aug 2, 2021, 5:05 PM IST

ಬೆಂಗಳೂರು (ಆ. 02): ಮಂತ್ರಿಯಾಗಿದ್ದವರನ್ನು ಮತ್ತೆ ಸಚಿವರನ್ನಾಗಿ ಮಾಡಬೇಡಿ. ಪಕ್ಷ ನಿಷ್ಠೆ ಇರುವವರನ್ನು ಗುರುತಿಸಿ. ಲಾಬಿ ಮಾಡದ ನಮ್ಮಂತವರಿಗೆ ಅವಕಾಶ ಕೊಡಿ ಎಂದು ಬಿಜೆಪಿ ಹಿರಿಯ ಶಾಸಕ ಸಿದ್ದು ಸವದಿ ಹೇಳಿದ್ದಾರೆ. 

'ನಾವು ಸಿದ್ಧಾಂತದ ಮೇಲೆ ಗೆದ್ದವರು. ಅಧಿಕಾರಕ್ಕಿಂತ ಪಕ್ಷ, ಅಭಿವೃದ್ಧಿಗೆ ಒತ್ತು ಕೊಡುತ್ತೇವೆ. ಕೊಟ್ಟವರಿಗೆ ಮತ್ತೆ ಸಚಿವ ಸ್ಥಾನ ಕೊಡುವುದರಲ್ಲಿ ಅರ್ಥವಿಲ್ಲ. ಹೊಸಬರಿಗೆ ಅವಕಾಶ ಕೊಡಿ. ನಮಗೂ ಈ ಬಾರಿ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಸಿದ್ದು ಸವದಿ ಭರವಸೆ ವ್ಯಕ್ತಪಡಿಸಿದ್ದಾರೆ. 

Video Top Stories