Asianet Suvarna News Asianet Suvarna News

ನಾಯಕತ್ವ ಬದಲಾವಣೆ ಚರ್ಚೆ? ದೆಹಲಿಗೆ ಹಾರಿರುವ ಸಚಿವರ ಲಿಸ್ಟ್‌ನಲ್ಲಿ ಮತ್ತೇನೇನಿದೆ?

ಸಚಿವ ಸಂಪುಟ ಸರ್ಕಸ್ ವಿಧಾನ ಮಂಡಲ ಅಧಿವೇಶನದ ನಂತರ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಸಚಿವ ಸ್ಥಾನಕ್ಕಾಗಿ ಸರ್ಕಸ್ ನಡೆಸುತ್ತಿರುವ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್ ಅಶೋಕ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು, ಸಚಿವರು ದೆಹಲಿಗೆ ತೆರಳಿದ್ದಾರೆ. 

Nov 27, 2020, 11:39 AM IST

ಬೆಂಗಳೂರು (ನ. 27): ಸಚಿವ ಸಂಪುಟ ಸರ್ಕಸ್ ವಿಧಾನ ಮಂಡಲ ಅಧಿವೇಶನದ ನಂತರ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಈಗಾಗಲೇ ಸಚಿವ ಸ್ಥಾನಕ್ಕಾಗಿ ಸರ್ಕಸ್ ನಡೆಸುತ್ತಿರುವ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್ ಅಶೋಕ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು, ಸಚಿವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಸಿಟಿ ರವಿ ಕಚೇರಿ ಪೂಜೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಬರುವ ಸಾಧ್ಯತೆ ಇದ್ದು ಅವರ ಜೊತೆ ಶಾಸಕರು ಸಂಪುಟ ಚರ್ಚೆ ನಡೆಸಬಹುದು ಎನ್ನಲಾಗಿದೆ. 

ಓಡಾಡಿದ್ದು, ಗುದ್ದಾಡಿದ್ದು ಎಲ್ಲಾ ವ್ಯರ್ಥ! ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರರಚಿದ ಹೈಕಮಾಂಡ್?