Asianet Suvarna News Asianet Suvarna News

ಸಂಪುಟ ಸರ್ಕಸ್ ಕಗ್ಗಂಟು; ಬಿಎಸ್‌ವೈ ಲೆಕ್ಕಾಚಾರವೇ ಬೇರೆ; ಯಾರಿಗೆ ಸಿಗಬಹುದು ಸ್ಥಾನ?

ಬಿಎಸ್ ಯಡಿಯೂರಪ್ಪ ರಾಜಕೀಯ ಪಟ್ಟುಗಳನ್ನು ಹಾಕುವಲ್ಲಿ ನಿಸ್ಸೀಮರು. ರಾಜಕೀಯ ಕಗ್ಗಂಟನ್ನೂ ಸರಾಗವಾಗಿ ಬಿಡಿಸುವ ಧುರೀಣ. ಸದ್ಯ ಸಂಪುಟ ಪುನಾರಚನೆ/ ವಿಸ್ತರಣೆ ಬಿಎಸ್‌ವೈಗೆ ಸವಾಲಾಗಿದೆ. ಪಕ್ಷದ ವರಿಷ್ಠರು ಇನ್ನೂ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. 
 

Nov 27, 2020, 4:46 PM IST

ಬೆಂಗಳೂರು (ನ. 27): ಬಿಎಸ್ ಯಡಿಯೂರಪ್ಪ ರಾಜಕೀಯ ಪಟ್ಟುಗಳನ್ನು ಹಾಕುವಲ್ಲಿ ನಿಸ್ಸೀಮರು. ರಾಜಕೀಯ ಕಗ್ಗಂಟನ್ನೂ ಸರಾಗವಾಗಿ ಬಿಡಿಸುವ ಧುರೀಣ. ಸದ್ಯ ಸಂಪುಟ ಪುನಾರಚನೆ/ ವಿಸ್ತರಣೆ ಬಿಎಸ್‌ವೈಗೆ ಸವಾಲಾಗಿದೆ. ಪಕ್ಷದ ವರಿಷ್ಠರು ಇನ್ನೂ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. 

ಓಡಾಡಿದ್ದು, ಗುದ್ದಾಡಿದ್ದು ಎಲ್ಲಾ ವ್ಯರ್ಥ! ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದ ಹೈಕಮಾಂಡ್?

ವಿಧಾನ ಮಂಡಲ ಅಧಿವೇಶನದ ನಂತರ ಸಂಪುಟ ಸರ್ಕಸ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಧಿವೇಶನದ ಬಳಿಕ ಹಾಗೂ ಗ್ರಾಮ ಪಂಚಾಯತ್ ಚುನಾವಣಾ ಘೋಷಣೆಗೂ ಮೊದಲೇ ಸರ್ಜರಿ ಮಾಡುವ ಉದ್ದೇಶ ಬಿಎಸ್‌ವೈಗೆ ಇದೆ ಎಂದು ಮೂಲಗಳು ಹೇಳುತ್ತಿವೆ. ಈ ಕಗ್ಗಂಟನ್ನು ಬಿಎಸ್‌ವೈ ಹೇಗೆ ನಿಭಾಯಿಸುತ್ತಾರೆ? ಯಾರಿಗೆ ಒಲಿಯಲಿದೆ ಸಚಿವ ಸ್ಥಾನ? ನೋಡೋಣ ಬನ್ನಿ..!