Asianet Suvarna News Asianet Suvarna News

ಕ್ಯಾಬಿನೆಟ್ ರಚನೆಯಾಗ್ತಿದ್ದಂತೆ ಅಖಾಡಕ್ಕಿಳಿದ ಸಿಎಂ, ಸಚಿವರಿಗೆ ಟಾಸ್ಕ್..!

Aug 5, 2021, 9:36 AM IST

ಬೆಂಗಳೂರು (ಆ. 05): ಮಂತ್ರಿಗಿರಿ ಸಿಕ್ಕ ಬೆನ್ನಲ್ಲೇ ನೂತನ ಸಚಿವರಿಗೆ ಸಿಎಂ ಬೊಮ್ಮಾಯಿ ಟಾಸ್ಕ್ ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಾಗೂ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹಾಗಾಗಿ ಜಿಲ್ಲೆಗಳಿಗೆ ತೆರಳಿ ವಾಸ್ತವಾಂಶ ಪರಿವೀಕ್ಷಣೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸಿಎಂ ಟಾಸ್ಕ್ ನೀಡಿದ್ದಾರೆ.

ಬೊಮ್ಮಾಯಿ ಸಂಪುಟಕ್ಕೆ 6 ಇನ್, 7 ಔಟ್, 29 ಜಾಕ್‌ಪಾಟ್..! 

ಸಂಪುಟ ರಚನೆಯಾದ ಬೆನ್ನಲ್ಲೇ ಹೊಸ ಸಚಿವರ ಜೊತೆ ಮೊದಲ ಸಂಪುಟ ಸಭೆ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್, ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು.