Asianet Suvarna News Asianet Suvarna News

ಸಂಪುಟ ಕ್ಲೈಮ್ಯಾಕ್ಸ್ ಹಿಂದಿದೆ ಬೊಮ್ಮಾಯಿ ಚಾಣಾಕ್ಷತೆ, ಹೈ ಕಮಾಂಡ್ ರಣತಂತ್ರ..!

Aug 4, 2021, 2:46 PM IST

ಬೆಂಗಳೂರು (ಆ. 04): ಭಾರೀ ಕುತೂಹಲ ಮೂಡಿಸಿದ್ದ ರಾಜ್ಯ ಸಂಪುಟ ವಿಸ್ತರಣೆಗೆ ಇಂದು ಮುಹೂರ್ತ ಕೂಡಿ ಬಂದಿದೆ. 20 ರಿಂದ 24 ಮಂದಿ ಸಂಪುಟ ಸೇರಲಿದ್ದಾರೆ. ನಾಲ್ವರು ಹೊಸಬರಿಗೆ ಮಣೆ ಹಾಕಲಾಗಿದೆ. ಬದಲಾವಣೆಗಿಂತ ಬ್ಯಾಲೆನ್ಸ್ ಮಾಡಲು ಹೈಕಮಾಂಡ್ ಮುಂದಾಗಿದೆ.

ಕಳೆದೆರಡು ದಿನಗಳಿಂದ ಸಂಪುಟ ರಚನೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳಾಗಿವೆ. ಒಂದು ಕಡೆ ತಮ್ಮ ಶಾಸಕರನ್ನು ಸಚಿವರನ್ನಾಗಿ ಮಾಡಿ ಎಂಬ ಬೆಂಬಲಿಗರ ಕೂಗು, ಇನ್ನೊಂದೆಡೆ ಮಾಜಿ ಸಿಎಂ ತಮ್ಮ ಆಪ್ತರಿಗೆ ಸ್ಥಾನ ಕೊಡುವಂತೆ ಒತ್ತಡ, ಹೀಗೆ ಸಿಎಂ ಬೊಮ್ಮಾಯಿಯವರಿಗೆ ಇದೊಂದು ಸವಾಲಾಗಿತ್ತು. ಈ ಸವಾಲುಗಳನ್ನು ಸಿಎಂ ಬೊಮ್ಮಾಯಿ ಎದುರಿಸಿದ್ದು ಹೇಗೆ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!