'ಖುಷಿ ಹೊತ್ತಲ್ಲಿ ಯತ್ನಾಳ್ ಅಂತವರ ಬಗ್ಗೆ ಮಾತನಾಡಲ್ಲ'
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.
ನವದೆಹಲಿ, (ಜ.10): ಅತ್ತ ಸಿಎಂ ಬಿಎಸ್ ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಮಾತುಕತೆಗೆ ದೆಹಲಿ ಹೋಗುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಕ್ರಾಂತಿ ಬಳಿಕ ರಾಜಕೀಯದಲ್ಲಿ ನನ್ನ ಪಾತ್ರ ಏನೆಂದು ಕಾಣಿಸುತ್ತೆ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದರು.
ಸಂಕ್ರಾಂತಿ ಬಳಿಕ ರಾಜಕೀಯದಲ್ಲಿ ನನ್ನ ಪಾತ್ರ ಏನೆಂದು ಕಾಣಿಸುತ್ತೆ: ಯತ್ನಾಳ್ ಬಾಂಬ್..!
ಇನ್ನು ಇದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.