Asianet Suvarna News Asianet Suvarna News

ಬರ್ತ್ ಡೇ ಸಮಾರಂಭ: ಸಿದ್ದು ಭಾಷಣದ ವೇಳೆ ಕುಳಿತ್ತಲ್ಲೇ ಭಾವುಕರಾದ ಯಡಿಯೂರಪ್ಪ

ಬಿ.ಎಸ್‌.ಯಡಿಯೂರಪ್ಪ ಅಭಿನಂದನಾ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಭಾಷಣದ ವೇಳೆ ಸಿಎಂ ಯಡಿಯೂರಪ್ಪ ಕುಳಿತ್ತಿದ್ದ ಸ್ಥಳದಲ್ಲಿಯೇ ಕೊಂಚ ಭಾವುಕರಾದಂತೆ ಭಾಸವಾಯ್ತು.

ಬೆಂಗಳೂರು, [ಫೆ.27]: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು [ಗುರುವಾರ] 78ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇ ಸಂಭ್ರಮದಲ್ಲಿರುವ ಬಿ.ಎಸ್.ಯಡಿಯೂರಪ್ಪಗೆ, ಪ್ರಧಾನಿ ಮೋದಿ ಸೇರಿ ಎಲ್ಲಾ ಪಕ್ಷಗಳ ಮುಖಂಡರು ಶುಭಾಶಯಗಳನ್ನ ಕೋರಿದ್ದಾರೆ. ಅಷ್ಟೇ ಅಲ್ಲದೇ ವಿರೋಧ ಪಕ್ಷದ ನಾಯಕರುಗಳು ಸಹ ಶುಭಾಶಯ ತಿಳಿಸಿದ್ದಾರೆ.

ಬಿಎಸ್‌ವೈಗೆ ಆಪ್ತ ಸಹಾಯಕನಿಂದ ಶುಭಾಶಯ ಸಂದೇಶ ಕಳುಹಿಸಿದ ಎಚ್‌ಡಿಕೆ

ಇನ್ನು ಬಿ.ಎಸ್‌.ಯಡಿಯೂರಪ್ಪ ಅಭಿನಂದನಾ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಯಡಿಯೂರಪ್ಪ ರಾಜಕೀಯ ಬದ್ಧ ವೈರಿ, ಆತ್ಮೀಯ ಸ್ನೇಹಿತ ಸಿದ್ದರಾಮಯ್ಯ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ರು. ಸಿಎಂ ಸಹ ಅಷ್ಟೇ ಆತ್ಮೀಯವಾಗಿ ಮಾತ್ನಾಡಿಸಿದ್ರು.. ಸಮಾರಂಭ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಬಿಎಎಸ್ ವೈ ಅವರನ್ನ ಹಾಡಿಹೊಗಳಿದ್ರು. ಈ ವೇಳೆ ಸಿದ್ದು ಮಾತು ಕೇಳಿ ಸಿಎಂ ಭಾವುಕರಾದ್ರು.

Video Top Stories