Asianet Suvarna News Asianet Suvarna News

ಮತ್ತೊಂದು ಹಂತಕ್ಕೆ ಹೋದ ವಿವಾದ: ವಿಜಯಪುರ ಕಾಂಗ್ರೆಸ್‌ ಕಚೇರಿ ಸಾವರ್ಕರ್ ಫೋಟೋಮಯ!

ವೀರ್ ಸಾವರ್ಕರ್ (Veer Savarakar) ಅವರ ಪೋಟೋ ವಿವಾದ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಸಾವರ್ಕರ್ ಫೋಟೋ ಪರ-ವಿರೋಧದ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಇನ್ನೊಂದೆಡೆ ವಿಜಯಪುರದಲ್ಲಿ ಸಾವರ್ಕರ್ ಫೋಟೋ ಮತ್ತೊಂದು ಹಂತಕ್ಕೆ ಹೋಗಿದೆ.

First Published Aug 22, 2022, 11:20 AM IST | Last Updated Aug 22, 2022, 11:20 AM IST

ವಿಜಯಪುರ, (ಆಗಸ್ಟ್.22): ವೀರ್ ಸಾವರ್ಕರ್ (Veer Savarakar) ಅವರ ಪೋಟೋ ವಿವಾದ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಸಾವರ್ಕರ್ ಫೋಟೋ ಪರ-ವಿರೋಧದ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ.

ಸಾವರ್ಕರ್ ಈ ದೇಶದ ಶ್ರೇಷ್ಠ ಪುತ್ರ ಎಂದು ಸ್ವತಃ ಇಂದಿರಾ ಗಾಂಧಿ ಹೇಳಿದ್ದರು: ಸಿಎಂ ಬೊಮ್ಮಾಯಿ

ಇನ್ನೊಂದೆಡೆ ವಿಜಯಪುರದಲ್ಲಿ ಸಾವರ್ಕರ್ ಫೋಟೋ ಮತ್ತೊಂದು ಹಂತಕ್ಕೆ ಹೋಗಿದೆ. ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಕಚೇರಿ ಬಾಗಿಲಿಗೆ ಹಾಗೂ ಗೋಡೆಗಳಿಗೆ ಬಿಜೆಪಿ ಯುವ ಘಟಕ ಸಾವರ್ಕರ್ ಫೋಟೋ ಲಗತ್ತಿಸಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

Video Top Stories