Asianet Suvarna News Asianet Suvarna News

ಬಿಜೆಪಿ ಟಾರ್ಗೆಟ್ 150 ಮುಟ್ಟೋಕೆ ಮೋದಿ ಅಸ್ತ್ರ ಪ್ರಯೋಗ!

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮಾಡುತ್ತಿರುವುದು ಒಂದೆಡೆ ಬಿಜೆಪಿಗೆ ಚುನಾವಣೆಯ ರಣೋತ್ಸಾಹ ತುಂಬಿದ್ದರೆ, ವಿಪಕ್ಷಗಳು ಮೋದಿ ಅಲೆಯನ್ನು ಎದುರಿಸೋದು ಹೇಗೆ ಎನ್ನುವ ಯೋಚನೆಯಲ್ಲಿಯೇ ಮಗ್ನರಾಗಿವೆ. ಕೇಸರಿ ಪಾಳಯ ಮುಂದಿನ ಚುನಾವಣೆಯಲ್ಲಿ 150 ಟಾರ್ಗೆಟ್‌ ಮುಟ್ಟಲು ಮೋದಿ ಅಸ್ತ್ರವನ್ನು ಭರ್ಜರಿಯಾಗಿ ಪ್ರಯೋಗ ಮಾಡುತ್ತಿದೆ..
 

First Published Feb 14, 2023, 6:58 PM IST | Last Updated Feb 14, 2023, 6:58 PM IST

ಬೆಂಗಳೂರು (ಫೆ.14): ಕರ್ನಾಟಕದಲ್ಲಿ ಪ್ರಧಾನಿ ಮೋದಿ ವಿಹಾರ ನಡೆಸುತ್ತಿದ್ದರೆ, ಕಮಲ ಪಡೆ ಖುಷ್ ಆಗಿದೆ. ಇನ್ನೊಂದ್ ಕಡೆ ಕೈ ಪಾಳಯಕ್ಕೆ ಶಾಕ್ ಆಗುತ್ತಿದೆ. ಕೇಸರಿ ಪಾಳಯವೇನೋ ತನ್ನ ಟಾರ್ಗೆಟ್ 150 ಅಂತ ಫಿಕ್ಸ್ ಆಗಿದೆ. ಆ ಟಾರ್ಗೆಟ್ ಮುಟ್ಟೋಕೆ ಮೋದಿ ಆರ್ಭಟಿಸುತ್ತಿದ್ದಾರೆ. ಅದನ್ನ ನೋಡಿದ ವಿಪಕ್ಷಗಳ ಪರಿಪರಿಯಾಗಿ ರಿಯಾಕ್ಷನ್‌ ನೀಡುತ್ತಿದೆ. ಹಳೆ ಮೈಸೂರು ಪ್ರಾಂತ್ಯ ಮೋದಿ ಅಶ್ವಮೇಧಕ್ಕೆ ಕೈ ಹಿಡಿಯುತ್ತಾ ಅನ್ನೋದೇ ಮೊದಲ ಪ್ರಶ್ನೆಯಾಗಿ ಕಾಡಿದ್ದರೆ, ಅದರ ಜೊತೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಬಗ್ಗೆಯೂ ಕುತೂಹಲವಿದೆ. ಈ ನಡುವೆ ಕೈ ಬಲಗೊಳಿಸಲು ರಾಹುಲ್‌ ಗಾಂಧಿ ಯಾವಾಗ ಬರ್ತಾರೆ ಅನ್ನೋದೇ ನಿಶ್ಚಯವಾಗಿಲ್ಲ.