ಹರ್ಷ ಹತ್ಯೆ ಆರೋಪಿಗಳನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ, ಪೊಲೀಸರಿಗೆ ಶಾಸಕ ಶಹಬ್ಬಾಸ್
ಸದನ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ನಡೆಗೆ ತುಮಕೂರು ಶಾಸಕ ಜ್ಯೋತಿ ಗಣೇಶ್ ಖಂಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಶಾಸಕ ಜ್ಯೋತಿ ಗಣೇಶ್, ಈಶ್ವರಪ್ಪನವರ ಮೇಲೆ ಕಾಂಗ್ರೆಸ್ ಮುಖಂಡರು ಇಲ್ಲ ಸಲ್ಲದ ಅಪಾದನೆ ಹೊರಿಸಿ ಸದನದ ಸಮಯ ವ್ಯರ್ಥ ಮಾಡಿದ್ರು. ರಾಷ್ಟ್ರ ಧ್ವಜದ ಬಗ್ಗೆ ಬಿಜೆಪಿಗೆ ಪಾಠ ಮಾಡೋ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರು ಅಧಿಕಾರವಿಲ್ಲದೇ ದಿಕ್ಕು ದಿವಾಳಿಯಾಗಿದ್ದಾರೆ ಎಂದು ವಗ್ದಾಳಿ ನಡೆಸಿದರು.
ತುಮಕೂರು, (ಫೆ.26): ಸದನ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ನಡೆಗೆ ತುಮಕೂರು ಶಾಸಕ ಜ್ಯೋತಿ ಗಣೇಶ್ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಶಾಸಕ ಜ್ಯೋತಿ ಗಣೇಶ್, ಈಶ್ವರಪ್ಪನವರ ಮೇಲೆ ಕಾಂಗ್ರೆಸ್ ಮುಖಂಡರು ಇಲ್ಲ ಸಲ್ಲದ ಅಪಾದನೆ ಹೊರಿಸಿ ಸದನದ ಸಮಯ ವ್ಯರ್ಥ ಮಾಡಿದ್ರು. ರಾಷ್ಟ್ರ ಧ್ವಜದ ಬಗ್ಗೆ ಬಿಜೆಪಿಗೆ ಪಾಠ ಮಾಡೋ ಅವಶ್ಯಕತೆ ಇಲ್ಲ.
ಕಾಂಗ್ರೆಸ್ ಪಕ್ಷದ ಮುಖಂಡರು ಅಧಿಕಾರವಿಲ್ಲದೇ ದಿಕ್ಕು ದಿವಾಳಿಯಾಗಿದ್ದಾರೆ ಎಂದು ವಗ್ದಾಳಿ ನಡೆಸಿದರು.
Harsha Murder Case ಹರ್ಷ ಕೊಲೆ ಕೇಸ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಿವಮೊಗ್ಗ ಎಸ್‌ಪಿ
ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನ ಕೂಡಲೇ ಬಂಧಿಸುವ ಮೂಲಕ ಬಸವರಾಜ್ ಬೊಮ್ಮಾಯಿ ಸರ್ಕಾರ ರಾಜ್ಯದ ಜನರ ಮೇಲೆ ವಿಶ್ವಾಸ ಮೂಡಿಸಿದೆ. ಈ ಕೇಸ್ ತನಿಖೆಗೆ ಪೊಲೀಸ್ ಇಲಾಖೆಗೆ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟಿದ್ರು. ಅಲ್ಲದೇ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳನ್ನ ನೇಮಕ ಮಾಡಿ ಆರೋಪಿಗಳನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ ಎಂದರು.