'ಕೋಡಿಹಳ್ಳಿ ನಕಲಿ ರೈತ ಹೋರಾಟಗಾರ, ಸಾರಿಗೆ ಹೋರಾಟಗಾರನ ಅಸಲಿ ಕತೆ ಬಿಚ್ಚಿಡ್ತೀನಿ'
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟದ ಸಚಿವರುಗಳು ಕೋಡಿಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ಕಾರ್ಯರಕರ್ತರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕೋಡಿಹಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು, ಇದೀಗ ಸಿಎಂ ಕಾರ್ಯದರ್ಶಿ ನಕಲಿ ರೈತ ಹೋರಾಟಗಾರ, ಸಾರಿಗೆ ಹೋರಾಟಗಾರನ ಅಸಲಿ ಕತೆ ಬಿಚ್ಚಿಡ್ತೀನಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರು, ಡಿ.(18): ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ ನೇತೃತ್ವವಹಿಸಿಕೊಂಡು, ರಾಜ್ಯಾದ್ಯಂತ ಮೂರು ಬಸ್ ಓಡಾಡದಂತೆ ಮಾಡಿದ್ದರು.
ಇದರ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟದ ಸಚಿವರುಗಳು ಕೋಡಿಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ಕಾರ್ಯರಕರ್ತರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕೋಡಿಹಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು, ಇದೀಗ ಸಿಎಂ ಕಾರ್ಯದರ್ಶಿ ನಕಲಿ ರೈತ ಹೋರಾಟಗಾರ, ಸಾರಿಗೆ ಹೋರಾಟಗಾರನ ಅಸಲಿ ಕತೆ ಬಿಚ್ಚಿಡ್ತೀನಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.