Asianet Suvarna News Asianet Suvarna News

ಹಾನಗಲ್ ಯುದ್ಧ ಗೆಲ್ಲಲು ಸಿಎಂ ಬೊಮ್ಮಾಯಿ ಪ್ಲಾನ್ : ಇವರಿಗೆಲ್ಲಾ ಬ್ರೇಕ್

Oct 13, 2021, 11:29 AM IST

ಬೆಂಗಳೂರು(ಅ.13):   ಹಾನಗಲ್ ಯುದ್ಧ ಗೆಲ್ಲಲು ಸಿಎಂ ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ. ಹಾನಗಲ್ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯನ್ನು ಗೆಲ್ಲಲು ಮುಖ್ಯಮಂತ್ರಿ ರಣತಂತ್ರ ರೂಪಿಸಿದ್ದು, ಇಲ್ಲಿಗೆ ಸ್ಟಾರ್ ಪ್ರಚಾರಕರ ದಂಡೆ ಸಾಗಲಿದೆ. 19 ಮಂದಿ ಬಿಜೆಪಿ ಸ್ಟಾರ್ ಪ್ರಚಾರಕರ ತಂಡ ತೆರಳಲಿದೆ. 

ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ​ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್!

ದಸರಾ ಹಬ್ಬದ ಬಳಿಕ ಲಿಂಗಾಯತ ಮತಗಳೇ ನಿರ್ಣಾಯಕ ವಾಗಿರುವ ಕ್ಷೇತ್ರಕ್ಕೆ ಪ್ರಭಾವಿಗಳು ತೆರಳಲಿದ್ದಾರೆ. ಇಲ್ಲಿಗೆ ಪ್ರಖರ ಹಿಂದುತ್ವವಾದಿ ಭಾಷಣಕಾರರಿಗೆ ಬ್ರೇಕ್ ಹಾಕಲಾಗುತ್ತಿದೆ.  ಬೇರೆ ರೀತಿಯ ಪರಿಣಾಮಗಳು ಎದುರಾಗಬಹುದಾದ ದೃಷ್ಟಿಯಿಂದ  ಪ್ಲಾನ್ ನಡೆದಿದೆ.