ಕರ್ನಾಟಕದಲ್ಲಿ ವರ್ಕ್ ಆಗುತ್ತಾ ಗುಜರಾತ್ ಮಾಡಲ್..ಹೊಸತನ ಪ್ರಯೋಗಿಸಿ ಒತ್ತಡಕ್ಕೆ ಬಿತ್ತಾ ಕಮಲ ಪಡೆ?
ಕರ್ನಾಟಕದಲ್ಲಿ ಬಿಜೆಪಿಯ ಕೋಟೆಯನ್ನು ಮತ್ತಷ್ಟು ಗಟ್ಟಿಯಾಗಿಸಲು ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದು, ಶತಾಯ ಗತಾಯ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.
ನಾಮಿನೇಷನ್ ಪ್ರಕ್ರಿಯೆಗೂ ಮುನ್ನ ಇಡೀ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು ಟಿಕೆಟ್ ಘೋಷಣೆ. ಕಾಂಗ್ರೆಸ್ ಪಕ್ಷ ತನ್ನ ಎರಡನೇ ಪಟ್ಟಿ ಘೋಷಣೆ ಮಾಡಿದಾಗ, ಅಲ್ಲಿ ಇಲ್ಲಿ ಸಣ್ಣ ಪುಟ್ಟ ಗೊಂದಲ, ಗದ್ದಲ ಉಂಟಾಗಿತ್ತು. ಆದರೆ ಕೋಲಾಹಲ ಸೃಷ್ಟಿಸಿದ್ದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿನ ರಿಲೀಸ್ ಮಾಡಿದ ಮೇಲೆ. ಇನ್ನು ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದು, ಶತಾಯ ಗತಾಯ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಕೋಟೆಯನ್ನ ಮತ್ತಷ್ಟು ಗಟ್ಟಿಯಾಗಿಸಬೇಕು, ಸಾಮ್ರಾಜ್ಯ ವಿಸ್ತರಿಸಬೇಕು ಎಂದು ಕೇಂದ್ರದ ನಾಯಕರು ಪಣ ತೊಟ್ಟಿದ್ದಾರೆ. ಹಾಗೇ ಈ ಗುರಿ ತಲುಪಲು ಬಿಜೆಪಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, 18 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ ಬಿಜೆಪಿ. ಅದಲ್ಲದೆ ಬರೋಬ್ಬರಿ 72 ಮಂದಿ ಹೊಸಬರಿಗೆ, ಮೊದಲ ಬಾರಿಗೆ ಟಿಕೆಟ್ ಕೊಟ್ಟು, ರಣರಂಗಕ್ಕೆ ಪ್ರವೇಶ ಕೊಡಿಸಿದೆ.. ಆದ್ರೆ ಈಗ ಪ್ಲಾನ್ ಬಿಜೆಪಿಗೆ ತೊಡಕಾಗುತ್ತಾ ಎನ್ನುವ ಅನುಮಾನ ಮೂಡುತ್ತಿದೆ.