Asianet Suvarna News Asianet Suvarna News

'NDA ಬಹುಮತ ಪಡೆದರೆ ನಿತೀಶ್ ಬಿಹಾರದ‌ ಸಿಎಂ, ಇದರಲ್ಲಿ ಯಾವ ಅನುಮಾನವೂ ಇಲ್ಲ'!

ಸದ್ಯ ಇಡೀ ದೇಶದ ಗಮನ ಸೆಳೆದಿರುವ ಬಿಹಾರ ಚುನಾವಣಾ ಫಲಿತಾಂಶ ಸಂಬಂಧ ಬಿಹಾರ ಜೆಡಿಯು ಮುಖ್ಯಸ್ಥ ವಶಿಷ್ಠ ನಾರಾಯಣ್ ಸಿಂಗ್ ಮಾತನಾಡುತ್ತಾ 'ಪಕ್ಷ ಬಹುಮತ ಸಾಧಿಸಿದರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಸರ್ಕಾರ ಮುನ್ನಡೆಸುತ್ತಾರೆ. ಜನರಿಗೆ ಕೊಟ್ಟ ಮಾತಿನಂತೆ ನಡುದುಕೊಳ್ಳುತ್ತೇವೆ ಎಂದಿದ್ದಾರೆ.

ಪಾಟ್ನಾ(ನ.10) ಸದ್ಯ ಇಡೀ ದೇಶದ ಗಮನ ಸೆಳೆದಿರುವ ಬಿಹಾರ ಚುನಾವಣಾ ಫಲಿತಾಂಶ ಸಂಬಂಧ ಬಿಹಾರ ಜೆಡಿಯು ಮುಖ್ಯಸ್ಥ ವಶಿಷ್ಠ ನಾರಾಯಣ್ ಸಿಂಗ್ ಮಾತನಾಡುತ್ತಾ 'ಪಕ್ಷ ಬಹುಮತ ಸಾಧಿಸಿದರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಸರ್ಕಾರ ಮುನ್ನಡೆಸುತ್ತಾರೆ. ಜನರಿಗೆ ಕೊಟ್ಟ ಮಾತಿನಂತೆ ನಡುದುಕೊಳ್ಳುತ್ತೇವೆ ಎಂದಿದ್ದಾರೆ.

ಬಿಹಾರ ಚುನಾವಣೆ: ಮುನ್ನಡೆ ಎಂದು ಸಂಭ್ರಮಿಸುವಂತಿಲ್ಲ, ಶಾಕ್ ಕೊಟ್ಟ ಆಯೋಗದ ಮಾಹಿತಿ!

ಇನ್ನು ಈ ವಿಜಯ ಬಿಜೆಪಿಯದ್ದು ಎನ್ನುತ್ತೀರೋ? ನಿತೀಶ್ ಕುಮಾರ್‌ರದ್ದೋ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಇಬ್ಬರ ಜಯ ಎಂದಿದ್ದಾರೆ. ಇದೇ ವೇಳೆ ಚಿರಾಗ್ ಪಾಸ್ವಾನ್ ನಡೆ ಕುರಿತು ಕೇಳಲಾದ ಪ್ರಶ್ನಗೆ ಉತ್ತರಿಸಿದ ಜೆಡಿಯು ನಾಯಕ ವೈಯುಕ್ತಿಕವಾಗಿ ಹೇಳುವುದಾದರೆ ಚಿರಾಗ್ ಪಾಸ್ವಾನ್‌ರನ್ನು ಎನ್‌ಡಿಗೆ ಮರಳಿ ಕರೆಸಿಕೊಳ್ಳಬಾರದು ಎಂದಿದ್ದಾರೆ.