Asianet Suvarna News Asianet Suvarna News

ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕ ನಮ್ಮನ್ನು ಕಾಡುತ್ತಿಲ್ಲ: ಬಿಸಿ ಪಾಟೀಲ್

Aug 2, 2021, 3:40 PM IST

ಬೆಂಗಳೂರು (ಆ. 02): ರಾಜ್ಯದಲ್ಲಿ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಇಂದು ಸಂಜೆ ನಡ್ಡಾರನ್ನು ಭೇಟಿಯಾಗಲಿದ್ದಾರೆ. ಇಂದೇ ಕ್ಲೈಮ್ಯಾಕ್ಸ್  ಸಿಗುವ ಸಾಧ್ಯತೆ ಇದೆ. 

ಸಚಿವ ಸಂಪುಟ ರಚನೆಗೆ ರೆಡಿಯಾಯ್ತು 3 ಸೂತ್ರ, ಸಂಭಾವ್ಯ ಪಟ್ಟಿ ಹೀಗಿದೆ

'ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕ ನಮ್ಮನ್ನು ಕಾಡುತ್ತಿಲ್ಲ. ನಮಗೆ ಬಿಜೆಪಿಯಲ್ಲಿ ಯಾವತ್ತೂ ಭಯ ಕಾಡಿಲ್ಲ. ಬಿಜೆಪಿ ನಮ್ಮನ್ನು ಗೌರವದಿಂದ ನಡೆಸಿಕೊಂಡಿದೆ. ಮುಂದೆಯೂ ನಡೆಸಿಕೊಳ್ಳುತ್ತದೆಂಬ ಭರವಸೆ ಇದೆ' ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ವಲಸಿಗ ಶಾಸಕರಿಂದಲೇ ಸರ್ಕಾರ ಆಗಿದೆ ಎಂದು ಬಿಎಸ್‌ವೈ ಹೇಳಿದ್ದಾರೆ. ಕೆಲ ವಲಸಿಗ ಶಾಸರನ್ನು ಕೈ ಬಿಡುತ್ತಾರೆ ಎಂಬುದು ಊಹಾಪೋಹ ಎಂದಿದ್ದಾರೆ.