'ದೇವೇಗೌಡ್ರ ಲೆಕ್ಕಾಚಾರ ಈಗ ನಡೆಯಲ್ಲ, ನಿಮ್ಮಿಷ್ಟಕ್ಕೆ ನೀವಿರಿ ಎಂದಿದ್ದೇವೆ'
ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆ ರಾಜಕೀಯ ವಲಯದಲ್ಲಿ ಮಾತು ಕೇಳಿ ಬರುತ್ತಿದೆ. 'ಈ ಬಾರಿ ಜೆಡಿಎಸ್ - ಬಿಜೆಪಿ ಮೈತ್ರಿ ಗಟ್ಟಿಯಾಗಿರುತ್ತದೆ. ಮೈತ್ರಿ ಮುರಿದರೆ ಏನಾಗುತ್ತದೆ ಎಂದು ಬಿಜೆಪಿಯವರಿಗೂ ಗೊತ್ತು' ಎಂದು ಹೊರಟ್ಟಿ ಹೇಳಿದ್ದಾರೆ.
ಬೆಂಗಳೂರು (ಡಿ. 20): ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆ ರಾಜಕೀಯ ವಲಯದಲ್ಲಿ ಮಾತು ಕೇಳಿ ಬರುತ್ತಿದೆ. 'ಈ ಬಾರಿ ಜೆಡಿಎಸ್ - ಬಿಜೆಪಿ ಮೈತ್ರಿ ಗಟ್ಟಿಯಾಗಿರುತ್ತದೆ. ಮೈತ್ರಿ ಮುರಿದರೆ ಏನಾಗುತ್ತದೆ ಎಂದು ಬಿಜೆಪಿಯವರಿಗೂ ಗೊತ್ತು. ದೇವೇಗೌಡರ ಆಲೋಚನೆಗಳೇ ಬೇರೆ. ಅವರ ರಾಜಕೀಯ ಲೆಕ್ಕಾಚಾರ ಈಗ ನಡೆಯೋದಿಲ್ಲ. ನಿಮ್ಮಿಷ್ಟಕ್ಕೆ ನೀವಿರಿ ಎಂತ ದೇವೇಗೌಡ್ರಿಗೆ ಹೇಳಿದ್ದೇವೆ' ಎಂದು ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.