ಕುಂದಾನಗರಿಯಲ್ಲಿ ಸಿಎಂ ಭರ್ಜರಿ ರೋಡ್ ಶೋ: 6 ಕ್ಷೇತ್ರಗಳಲ್ಲಿ ಸಂಚಾರ

ಸಿಎಂ ಬೊಮ್ಮಾಯಿ ಭರ್ಜರಿ ಕ್ಯಾಂಪೇನ್‌ ಮಾಡುತ್ತಿದ್ದು, ಘಟಾನುಘಟಿ ನಾಯಕರ ಪರ ಮತಬೇಟೆಗೆ ಇಳಿದಿದ್ದಾರೆ.

First Published Apr 25, 2023, 11:11 AM IST | Last Updated Apr 25, 2023, 11:11 AM IST

ಬೆಳಗಾವಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ರೋಡ್‌ ಶೋ ಮೂರನೇ ದಿನವು ಮುಂದುವರೆದಿದೆ. ಸಿಎಂ ಬಿಜೆಪಿಯ ಘಟಾನುಘಟಿ ನಾಯಕರ ಪರ ಭರ್ಜರಿ ಕ್ಯಾಂಪೇನ್‌ ಮಾಡುತ್ತಿದ್ದಾರೆ.  ಇಂದು ಒಂದೇ ದಿನ ಬೆಳಗಾವಿಯ ಆರು ಕ್ಷೇತ್ರಗಳಲ್ಲಿ ಸಿಎಂ ಸಂಚಾರ ಮಾಡಲಿದ್ದಾರೆ. ಬಳಿಕ ಧಾರವಾಡದಿಂದ ಮಧ್ಯಾಹ್ನ 1ಕ್ಕೆ ಕಿತ್ತೂರಿಗೆ ಸಿಎಂ ಬರಲಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್‌ ದೊಡ್ಡಗೌಡರ ಪರ ರೋಡ್‌ ಶೋ ನಡೆಸಲಿದ್ದಾರೆ. ನಂತರ ಖಾನಾಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬೈಲಹೊಂಗಲದಲ್ಲಿ ಜಗದೀಶ್‌ ಮೆಟಗುಡ್ಡ ಪರ ಸಿಎಂ ಮತಬೇಟೆ ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ: ಗುಂಡ್ಲುಪೇಟೆಯಲ್ಲಿ ಅಮಿತ್‌ ಶಾ ರೋಡ್‌ ಶೋ: ಹಳೇ ಮೈಸೂರು ಭಾಗವೇ ಕೇಸರಿ ಪಡೆ ಟಾರ್ಗೆಟ್‌

Video Top Stories