Asianet Suvarna News Asianet Suvarna News

ಎಲೆಕ್ಷನ್ ಸ್ಪೆಶಲ್:  ಆನಂದ್ ಸಿಂಗ್ ಒಂದೇ ಕಲರ್ ಶರ್ಟ್ ಧರಿಸುವುದರ ಹಿಂದಿನ ಮರ್ಮ!

ಬಳ್ಳಾರಿ(ನ. 29) ಹೊಸಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆನಂದ್ ಸಿಂಗ್ ಜ್ಯೋತಿಷಿ ಮೊರೆ ಹೋದ್ರಾ    ಎನ್ನುವ ಪ್ರಶ್ನೆ ಮೂಡಿದೆ.  ಒಂದೇ ಕಲರ್ ಶರ್ಟ್ ಧರಿಸುತ್ತ ಆನಂದ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್ 16 ರಿಂದಲೂ ಆನಂದ್ ಸಿಂಗ್ ಪರ್ಪಲ್  ಬಣ್ಣದ ಶರ್ಟ್ ಧರಿಸುತ್ತಲೇ ಬಂದಿದ್ದಾರೆ. ಪ್ರತಿದಿನ ಒಂದೇ ಕಲರ್ ಶರ್ಟ್ ಹಾಗೂ ಬಿಳಿ ಪ್ಯಾಂಟ್ ಧರಿಸುತ್ತಿರುವ ಆನಂದ್ ಸಿಂಗ್ ಹಿಂದಿನ ಉದ್ದೇಶ ಏನು ಎನ್ನುವುದು ಗೊತ್ತಾಗಿಲ್ಲ.

ಆನಂದ್ ಸಿಂಗ್ ಡ್ರೆಸ್ ಕೋಡ್ ಗೆ ಕಾರ್ಯಕರ್ತರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜ್ಯೋತಿಷಿ ಸಲಹೆ ಮೇರೆಗೆ ಒಂದೇ ಡ್ರೆಸ್ ಕೋಡ್ ಗೆ ಮೋರೆ ಹೋದ್ರಾ ಆನಂದ್ ಸಿಂಗ್ ಎನ್ನುವುದಕ್ಕೆ ಅವರೇ ಸ್ಪಷ್ಟನೆ ನೀಡಬೇಕಿದೆ. ನೆಗೆಟಿವ್ ಎನರ್ಜಿ ಯಿಂದ ಪಾರಾಗಲು ಪರ್ಪಲ್ ಶರ್ಟ್ ಧರಿಸುತ್ತಿದ್ದಾರಾ ಸಿಂಗ್ ಎಂದು ಕೇಳಿದರೆ ನನಗೆ ಬಹಳ ಡ್ರೆಸ್ ಸೆನ್ಸ್‌ ಇದೆ. ಈ ಶರ್ಟ್ ಇಷ್ಟ ಆಯಿತು ಅದಕ್ಕೆ ಅಂಗಡಿಯಲ್ಲಿ ಖರೀದಿಸಿ ಹಾಕುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.

ಉಪಚುನಾವಣೆ ಸಕಲ ಸುದ್ದಿಗಳು