Asianet Suvarna News Asianet Suvarna News

ಪ್ರಾಣ ಕೊಟ್ಟಾದರೂ ಅಖಂಡತೆಯನ್ನು ಉಳಿಸಿಕೊಳ್ಳುತ್ತೇವೆ: ಬಳ್ಳಾರಿಯಲ್ಲಿ ಜನಾಕ್ರೋಶ

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ, ವಿಜಯನಗರ ಜಿಲ್ಲೆ ರಚನೆಗೆ ಇಂದು ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಬಳ್ಳಾರಿಯಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಆನಂದ್‌ ಸಿಂಗ್ ಮತ್ತು ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. 

Nov 18, 2020, 5:58 PM IST

ಬೆಂಗಳೂರು (ನ. 18): ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ, ವಿಜಯನಗರ ಜಿಲ್ಲೆ ರಚನೆಗೆ ಇಂದು ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಬಳ್ಳಾರಿಯಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಆನಂದ್‌ ಸಿಂಗ್ ಮತ್ತು ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. 

ಬಳ್ಳಾರಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸ್ತಾರೆ! ಬಿಜೆಪಿ ಶಾಸಕನಿಂದಲೇ ವಾರ್ನಿಂಗ್!

ಬಳ್ಳಾರಿ ಜನ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಬಳ್ಳಾರಿ ಗುರುತಿಸಿಕೊಳ್ಳುವುದೇ ಹಂಪಿಯಿಂದ. ಯಾವ ಕಾರಣಕ್ಕೆ ಬೇರೆ ಮಾಡುತ್ತಿದ್ದೇವೆ ಎನ್ನುವುದಕ್ಕೆ ಕಾರಣ ಕೊಡುತ್ತಿಲ್ಲ. ವಿಜಯನಗರ ಭಾಗದ ಜನರಿಗೆ ಬಳ್ಳಾರಿ ದೂರವಾಗುತ್ತದೆ ಎಂಬ ಕಾರಣ ಕೊಡುತ್ತಿದ್ದಾರೆ. ಇದು ಸರಿಯಲ್ಲ. ಬಳ್ಳಾರಿ ಜನತೆ ಪ್ರಾಣ ಕೊಟ್ಟಾದರೂ ಈ ಅಖಂಡತೆಯನ್ನು ಉಳಿಸಿಕೊಳ್ಳುತ್ತೇವೆ' ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.