athirathara akhada: ಯಾರಾಗ್ತಾರೆ ಪುತ್ತೂರಿನ ಮುತ್ತು..? ಬಿಜೆಪಿಗೆ ಭಯ ಹುಟ್ಟಿಸಿದ್ಯಾ ಪುತ್ತಿಲ ಸ್ಪರ್ಧೆ..?

ಹಿಂದುತ್ವದ ಪ್ರಯೋಗಶಾಲೆ ಎಂದು ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಈ ಬಾರಿ ಆಬಿಜೆಪಿಗೆ ಕಬ್ಬಿಣದ ಕಡಲೆಯಾಂತಾದ ಲಕ್ಷಣಗಳು ಕಾಣುತ್ತಿದೆ. 

First Published Apr 22, 2023, 2:59 PM IST | Last Updated Apr 22, 2023, 2:59 PM IST

ಹಿಂದುತ್ವದ ಪ್ರಯೋಗಶಾಲೆ ಎಂದು ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಈ ಬಾರಿ ಆಬಿಜೆಪಿಗೆ ಕಬ್ಬಿಣದ ಕಡಲೆಯಾಂತಾದ ಲಕ್ಷಣಗಳು ಕಾಣುತ್ತಿದೆ. ಯಾಕೆಂದರೆ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಹಿಂದೂಪರ ಮುಖಂಡ ಅರುಣ್ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿದಿದ್ದು, ಅವರಿಗೆ ಸಿಗುತ್ತಿರುವ ಜನಬೆಂಬಲ ನೋಡಿ ಕಮಲ ಪಾಳಯ ದಂಗು ಬಡಿದಿದ್ದರೆ, ಕಾರ್ಯಕರ್ತರ ಒತ್ತಾಯದ ಮೇರೆಗೆ ಹಾಗೂ ಈ ಬಾರಿ ಪುತ್ತೂರಿನಲ್ಲಿ ಹಿಂದುತ್ವ VS ಹಿಂದುತ್ವವಾಗಿರುವುದರಿಂದ ಹಿಂದುತ್ವವನ್ನು  ಮುನ್ನಲೆಗೆ ತರಲು, ಕಾರ್ಯಕರ್ತರ ಭಾವನೆಗೆ ಬೆಲೆ ನೀಡಿ ಅವರ ಪರವಾಗಿ ಕೆಲಸ ನಿರ್ವಹಿಸಲು ಅರುಣ್ ಕುಮಾರ್ ಪುತ್ತಿಲರವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಯಾರಾಗ್ತಾರೆ ಪುತ್ತೂರಿನ ಮುತ್ತು..? ಬಿಜೆಪಿ VS ಪುತ್ತಿಲ ಫೈಟ್..ಕಾಂಗ್ರೆಸ್ಸಿಗೆ ಲಾಭವಾಗುತ್ತಾ..?