ಬ್ಯಾಟರಾಯನಪುರ ಅತಿರಥರ ಅಖಾಡ: ಕೃಷ್ಣಬೈರೇಗೌಡರ ಎದುರು ನಿಲ್ಲೋ ಕೇಸರಿ ಕಲಿ ಯಾರು..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಬ್ಯಾಟರಾಯನಪುರ  ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

First Published Apr 7, 2023, 9:26 AM IST | Last Updated Apr 7, 2023, 9:26 AM IST

ಬ್ಯಾಟರಾಯನಪುರ ನಗರ ಹಾಗೂ ಗ್ರಾಮೀಣ ಭಾಗಗಳನ್ನು ಒಳಗೊಂಡಿರುವ ಬೆಂಗಳೂರಿನಲ್ಲಿರುವ ಇರುವ ವಿಶೇಷವಾದ ಕ್ಷೇತ್ರ. ಇನ್ನು ಕೃಷ್ಣಬೈರೇಗೌಡರು ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ ಹೈಲೋಲ್ಟೇಜ್ ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿ ತನ್ನ ಬಾವುಟ ಹಾರಿಸಲು ಪ್ರತಿ ಸಲ ಪ್ರಯತ್ನ ಮಾಡುತ್ತಲೇ ಇದೆ. ಆದ್ರೆ ಕಾಂಗ್ರೆಸ್ ಬಿಗಿ ಹಿಡಿತದಲ್ಲಿ ಇರುವ ಈ ಕ್ಷೇತ್ರದಲ್ಲಿ ಕಾಣೋದು ಕಾಂಗ್ರೆಸ್ ಬಾವುಟ ಮಾತ್ರ. ಈ ಬಾರಿ ಶತಾಯಗತಾಯ ಗೆಲ್ಲಲೇ ಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಕಣಕ್ಕಿಳಿತಿರೋದು ಎಲೆಕ್ಷನ್ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಕಾಂಗ್ರೆಸ್ ಕಟ್ಟಾಳು ಕೃಷ್ಣಬೈರೇಗೌಡ, ಒಟ್ಟೂ 114964 ಮತಗಳೊಂದಿಗೆ ಬಿಜೆಪಿಯ ಎ ರವಿ ವಿರುದ್ಧ ಗೆದ್ದಿದ್ದರು. ಎ ರವಿ, 109293 ಮತಗಳನ್ನ ಪಡೆದು ಪ್ರಬಲ ಸ್ಪರ್ಧಿ ಎನಿಸಿದ್ದರು. ಈ ಬಾರಿ ಕೃಷ್ಣ ಬೈರೇಗೌಡ ವಿರುದ್ಧ ಮೂರ್ನಾಲ್ಕು ಹೆಸರುಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ. ಈ ಬಾರಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನ ಉಳಿಸಿಕೊಳ್ಳುತ್ತಾ..? ಬಿಜೆಪಿ ಮ್ಯಾಜಿಕ್ ಮಾಡುತ್ತಾ ಅನ್ನೋದೇ ಸದ್ಯದ ಪ್ರಶ್ನೆ.