Asianet Suvarna News Asianet Suvarna News

Asianet Suvarna Focus: ರಾಜನ ಪಟ್ಟಕ್ಕೆ ಬರೋಕೆ ಶುರುವಾಗಿದೆ ರಾಜತಂತ್ರ..!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ರಾಜಕೀಯ ಪಕ್ಷಗಳಿಂದ ತಂತ್ರ-ರಣತಂತ್ರಗಳು ಶುರುವಾಗಿವೆ.

ಬೆಂಗಳೂರು, (ಏ.23): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ರಾಜಕೀಯ ಪಕ್ಷಗಳಿಂದ ತಂತ್ರ-ರಣತಂತ್ರಗಳು ಶುರುವಾಗಿವೆ. ರಾಜ್ಯದ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಹೊಂದಾಣಿಕೆ ಮೂಡಿಸುವ ಮುಖ್ಯ ಗುರಿಯೊಂದಿಗೆ ರಾಜ್ಯಕ್ಕೆ ಆಗಮಿಸಿರುವ ಸುನಿಲ್‌ ಕನ್ನುಗೋಲು ಅವರು ಮುಂದಿನ ಚುನಾವಣೆಯು ಕಾಂಗ್ರೆಸ್‌ ವರ್ಸಸ್‌ ಮೋದಿ ಎಂದಾಗದೆ ಕಾಂಗ್ರೆಸ್‌ ವರ್ಸಸ್‌ ಬೊಮ್ಮಾಯಿ ಆಗುವಂತೆ ಮಾಡಬೇಕು ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ರಣತಂತ್ರಕ್ಕೆ ಸುನಿಲ್: 2014ರಲ್ಲಿ ಮೋದಿ ಪರ ಕೆಲಸ ಮಾಡಿದ್ದ ತಂತ್ರಗಾರ!

ಅದರಲ್ಲೂ ಕಾಂಗ್ರೆಸ್ 224 ಕ್ಷೇತ್ರಗಳಿಗೈ ಪ್ರತ್ಯೇಕ ಕಾರ್ಯತಂತ್ರಗಳನ್ನ ರೂಪಿಸುತ್ತಿದೆ. 150 ಟಾರ್ಗೆಟ್ ಇಟ್ಟುಕೊಂಡಿರುವ ಕಾಂಗ್ರೆಸ್, ಹಲವು ಪ್ಲಾನ್‌ಗಳನ್ನ ಮಾಡುತ್ತಿದೆ. ಹೀಗೆ ತಂತ್ರಗಳನ್ನ ಇಟ್ಟುಕೊಂಡು ನಿಂತಿರೋ ಕಾಂಗ್ರೆಸ್‌ಗೆ ದೊಡ್ಡ ಗೊಂದಲ ಶುರುವಾಗಿದೆ. ಅದುವೇ ಮುಂದಿನ ಸಿಎಂ ಯಾರು..? ಸಿಎಂ ಅಭ್ಯರ್ಥಿ ಸಿದ್ದುನಾ..? ಡಿಕೆಶಿನಾ..?ಹೈಕಮಾಂಡ್ ಫಾರ್ಮುಲಾ ಏನು? ಬೆಂಗಳೂರು ಟು ತುಮಕೂರು ಕಾರ್‌ ಮಿಂಟಿಂಗ್‌ ಸ್ಟೋರಿ ಏನು?