Asianet Suvarna News Asianet Suvarna News

'ನಾವು ಅಳುವುದಿಲ್ಲ, ಕೆಲಸ ಮಾಡ್ತೇವೆ, ಮಂಡ್ಯದಲ್ಲಿ ಬಾವುಟ ಹಾರಿಸಿ ತೋರಿಸ್ತೇವೆ'

ಒಂದೆಡೆ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ರೆ, ಮತ್ತೊಂದೆಡೆ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಕುಮಾರಸ್ವಾಮಿ ನಡುವೆ ಮಾತಿನ ಸಮರ ಮತ್ತಷ್ಟ ತಾರಕಕ್ಕೇರಿದೆ.

Aug 11, 2022, 10:34 PM IST

ಮಂಡ್ಯ, (ಆ.11): ಒಂದೆಡೆ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ರೆ, ಮತ್ತೊಂದೆಡೆ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಕುಮಾರಸ್ವಾಮಿ ನಡುವೆ ಮಾತಿನ ಸಮರ ಮತ್ತಷ್ಟ ತಾರಕಕ್ಕೇರಿದೆ.

'ಇನ್ನೊಬ್ಬರ ಕಣ್ಣೀರಿನ ಬಗ್ಗೆ ಇದೆಂಥಾ ವಿಕಾರ? ಇದೇನಾ ಸಂಘ ಕಲಿಸಿದ ಸಂಸ್ಕಾರ?'

ದಾಖಲೆಗಳ ಸಮೇತ ನಿಮ್ಮದು ಬಿಚ್ಚಿಡಲೇ ಎಂದು ಕುಮಾರಸ್ವಾಮಿ ಗುಡುಗಿದ್ದರು. ಇದೀಗ ಇದಕ್ಕೆ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ನಾವು ಅಳುವುದಿಲ್ಲ, ಕೆಲಸ ಮಾಡಿ ತೋರಿಸ್ತೇವೆ, ಮಂಡ್ಯದಲ್ಲಿ ಬಾವುಟ ಹಾರಿಸಿ ತೋರಿಸ್ತೇವೆ ಎಂದು ಪರೋಕ್ಷವಾಗಿ ಎಚ್‌ಡಿಕೆ ಕಣ್ಣೀರಿಗೆ ಟಾಂಗ್ ಕೊಟ್ಟಿದ್ದಾರೆ.