ಅಗ್ನಿಕುಂಡದಲ್ಲಿ ಏಕಾಂಗಿಯಾದ ಅಖಂಡ..ಅಂದು ಮನೆ ಭಸ್ಮ..ಇಂದು ಟಿಕೆಟ್ ಮಿಸ್..

2018ರ ವಿಧಾನಸಭಾ ಚುನಾವಣೆಯಲ್ಲಿ  ಹೆಚ್ಚು ಲೀಡ್‌ನಲ್ಲಿ ಗೆದ್ದಿದ್ದ ಶಾಸಕ  ಅಖಂಡ ಶ್ರೀನಿವಾಸ ಮೂರ್ತಿ. ಆದ್ರೆ ಈ ಬಾರಿ ಆ ಶಾಸಕನಿಗೆ ಟಿಕೆಟ್‌ ಇಲ್ಲ. ದುಷ್ಕರ್ಮಿಗಳು ಇಟ್ಟ ಬೆಂಕಿಗೆ ಮನೆಯನ್ನು ಕಳೆದುಕೊಂಡಿದ್ದ ಶಾಸಕನಿಗೆ , ಕಾಂಗ್ರೆಸ್ ಟಿಕೆಟ್ ಇಲ್ಲ.

First Published Apr 18, 2023, 11:45 AM IST | Last Updated Apr 18, 2023, 11:45 AM IST

ಕಳೆದ ಬಾರಿ ಅತೀ ಹೆಚ್ಚು ಲೀಡ್‌ನಲ್ಲಿ ಗೆದ್ದಿದ್ದ ಶಾಸಕ  ಅಖಂಡ ಶ್ರೀನಿವಾಸ ಮೂರ್ತಿ. ಆದ್ರೆ ಈ ಬಾರಿ ಆ ಶಾಸಕನಿಗೆ ಟಿಕೆಟ್‌ ಇಲ್ಲ. ದುಷ್ಕರ್ಮಿಗಳು ಇಟ್ಟ ಬೆಂಕಿಗೆ ಮನೆಯನ್ನು ಕಳೆದುಕೊಂಡಿದ್ದ ಶಾಸಕನಿಗೆ , ಕಾಂಗ್ರೆಸ್ ಟಿಕೆಟ್ ಇಲ್ಲ.. ಇದು ಪುಲಿಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ದುರಂತ ಕಥೆ. 81 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದ ಶಾಸಕನಿಗೆ ಈ ಬಾರಿ ಟಿಕೆಟ್ ಇಲ್ಲ. ಕಾಂಗ್ರೆಸ್ ಪಕ್ಷ ಅಖಂಡ ಶ್ರೀನಿವಾಸ್ ಮೂರ್ತಿಗೆ ಮೊದಲ ಮೂರೂ ಪಟ್ಟಿಗಳಲ್ಲಿ ಟಿಕೆಟ್ ಕೊಟ್ಟಿಲ್ಲ. ತಮಗೆ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಮಾತಾಡ್ತಾ  ಅಖಂಡ ಕಣ್ಣೀರು ಹಾಕಿದ್ದಾರೆ.ಪುಲಿಕೇಶಿನಗರ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪರೋಕ್ಷವಾಗಿ ಆರೋಪ ಮಾಡುತ್ತುರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ. ಅಖಂಡ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಬೆಂಗಳೂರಿನ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಸಂಪತ್ ರಾಜ್ ಅರೆಸ್ಟ್ ಆಗಿ ಜೈಲಿಗೂ ಹೋಗಿ ಬಂದಿದ್ರು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಈ ಸಂಪತ್ ರಾಜ್ ಕೆಪಿಸಿಸಿ ಅಧ್ಯಕ್ಷರ ಅತ್ಯಾಪ್ತ. ಜೈಲಿಂದ ರಿಲೀಸ್ ಆದಮೇಲೆ ಡಿಕೆಶಿ ಜೊತೆ ಸಂಪತ್'ರಾಜ್ ಬಹಿರಂಗ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಅಖಂಡ ಶ್ರೀನಿವಾಸಮೂರ್ತಿ ಸಾಕಷ್ಟು ಬಾರಿ ವಿರೋಧಿಸಿದ್ದಾರೆ. ಡಿಕೆಶಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದೂ ಇದೆ. ಹಾಗಾದ್ರೆ ಅಖಂಡಗೆ ಟಿಕೆಟ್ ಕೈತಪ್ಪಲು ಕಾರಣರಾಗಿರೋ ಕಾಂಗ್ರೆಸ್'ನ ಆ ಹಿರಿಯ ನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವ್ರಾ..?ಖಂಡಗೆ ಟಿಕೆಟ್ ತಪ್ಪಿಸಿದ್ದು ಯಾರು..? ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದಿದ್ದ ಶಾಸಕ, ದುರಂತ ನಾಯಕನಾಗಿದ್ದು ಹೇಗೆ..? ಈ ವಿಡಿಯೋ ನೋಡಿ