Asianet Suvarna News Asianet Suvarna News

ಜನ ಬಯಸಿದರೆ ಮದ್ದೂರಿನಿಂದ ಸ್ಪರ್ಧೆ: ಅಭಿಷೇಕ್ ಅಂಬರೀಶ್ ಗೆಲುವಿನ ಶಕ್ತಿಯೇನು..?

Aug 2, 2021, 4:04 PM IST

ಬೆಂಗಳೂರು (ಆ. 02): ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶದ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತವೆ. ಈ ಬಗ್ಗೆ ಸ್ವತಃ ಅಭಿಷೇಕ್ ಸ್ಪಷ್ಟನೆ ನೀಡಿದ್ದಾರೆ. 'ಜನ ಬಯಸಿದರಷ್ಟೇ ರಾಜಕಾರಣಕ್ಕೆ ಬರುತ್ತೇನೆಯೇ ಹೊರತು ವೈಯಕ್ತಿಕವಾಗಿ ರಾಜಕಾರಣಕ್ಕೆ ಬರಲು ಯಾವುದೇ ಮನಸ್ಸಿಲ್ಲ. ಒಂದು ವೇಳೆ ರಾಜಕೀಯ ಪ್ರವೇಶಿಸಿದರೆ ಅಂದು ತಂದೆ ಅಂಬರೀಷ್‌ ಅವರ ತವರು ಕ್ಷೇತ್ರವಾದ ಮದ್ದೂರಿನಿಂದಲೇ' ಎಂದು ಅಭಿಷೇಕ್‌ ಅಂಬರೀಶ್‌ ಹೇಳಿದರು. 

ಒಂದು ವೇಳೆ ಜಿಲ್ಲೆಯ ಜನತೆ ಮತ್ತು ನನ್ನ ತಂದೆಯ ಅಭಿಮಾನಿಗಳು, ಬೆಂಬಲಿಗರು ಬಯಸಿದಲ್ಲಿ ಮಾತ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಬೇಕೇ ಅಥವಾ ಬೇಡವೇ ಎನ್ನುವುದನ್ನು ಆಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. 

Video Top Stories