ಮಾನವೀಯತೆಯಲ್ಲಿ ಪತಿ ಅಪ್ಪಟ ಚಿನ್ನ: ಇತ್ತ ಕಾಲಿಗೆ ಬಿದ್ರೂ ಸ್ಪಂದಿಸದ ಅನಿತಕ್ಕ
ಕಷ್ಟ ಅಂತ ಬಂದವರಿಗೆ ಇಲ್ಲ ಅನ್ನೊಲ್ಲ ಕುಮಾರಸ್ವಾಮಿ ಆದ್ರೆ, ಇತ್ತ ಸಮಸ್ಯೆಗೆ ಪರಿಹಾರ ಮಾಡಿ ಎಂದು ಅನಿತಾ ಕುಮಾರಸ್ವಾಮಿ ಕಾಲಿಗೆ ಬಿದ್ರೂ ಸ್ಪಂದಿಸದೇ ಜಾಗ ಖಾಲಿಮಾಡಿದ್ದಾರೆ.
ರಾಮನಗರ,[ಡಿ.11]: ರಾಜಕೀಯದಲ್ಲಿ ಸಿಎಂ ಕುಮಾರಸ್ವಾಮಿ ಅವರದ್ದು, ತಂತ್ರ-ಪ್ರತಿತಂತ್ರ ರಾಜಕಾರಣ ಇರಬಹುದು. ಆದರೆ ಮಾನವೀಯತೆಯಲ್ಲಿ ಮಾತ್ರ ಕುಮಾರಸ್ವಾಮಿ ಅಪ್ಪಟ ಚಿನ್ನ ಎಂದರೆ ತಪ್ಪಾಗಲಾರದು.
ಕಷ್ಟ ಅಂತ ಬಂದವರಿಗೆ ಕುಮಾರಸ್ವಾಮಿ ಯಾವತ್ತು ಇಲ್ಲ ಅಂದಿಲ್ಲ. ಅದರಲ್ಲೂ ಬಡಜನರು ಆರೋಗ್ಯ ಸಮಸ್ಯೆ ಅಂತ ಬಂದ್ರೆ ಸಾಕು ಸ್ಥಳದಲ್ಲಿಯೇ ಅವರಿಗೊಂದು ಪರಿಹಾರ ಕೊಟ್ಟೇ ಕಳುಹಿಸುತ್ತಾರೆ. ಇಂತಹ ಸಮಸ್ಯೆಗೆ ಸಹಾಯ ಮಾಡಲು ಇರುವ ಮುಖ್ಯಮಂತ್ರಿ ಪರಿಹಾರ ನಿಧಿಯನ್ನ ಸಿಎಂ ಕುಮಾರಸ್ವಾಮಿ ಹಿಂದಿನ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಉಪಯೋಗಿಸಿದ್ದಕ್ಕೆ ದಾಖಲೆಗಳಿವೆ.
ಆದ್ರೆ, ಇತ್ತ ಪತ್ನಿ ಅನಿತಕ್ಕ ಮಾತ್ರ ವಿರುದ್ಧವಾಗಿದ್ದಾರೆ. ಹೋದಲ್ಲಿ ಬಂದಲ್ಲಿ ಕುಮಾರಸ್ವಾಮಿ ಅವರು ಬಡವರಿಗೆ ಹೇಗೆಲ್ಲಾ ಸಹಾಯ ಮಾಡ್ತಾರೆ. ಕಷ್ಟ ಅಂತ ಬಂದವರಿಗೆ ಸ್ಪಂದಿಸುತ್ತಾರೆ ಅಂತೆಲ್ಲ ಊರು ಉಸಾಬರಿ ಮಾತನಾಡುವ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ತಮ್ಮ ಕ್ಷೇತ್ರದ ಮತದಾರನೊಬ್ಬ ಸಮಸ್ಯೆಗೆ ಪರಿಹಾರ ಕೊಡಿ ಎಂದು ಕಾಲು ಮುಗಿದು ಬೇಡಿಕೊಂಡರೂ ಅದ್ಯಾವುದಕ್ಕೆ ಕೇರ್ ಮಾಡದ ಅನಿತಕ್ಕ ಕಾರತ್ತಿ ಅಲ್ಲಿಂದ ಜಾಗ ಖಾಲಿ ಮಾಡಿರುವ ಪ್ರಸಂಗ ನಡೆದಿದೆ. ಅಷ್ಟಕ್ಕೂ ಆಗಿದ್ದೇನು..? ವಿಡಿಯೋನಲ್ಲಿ ನೀವೇ ನೋಡಿ..